​​ಕೋವಿಡ್ ಲಸಿಕೆಯ ವೈಜ್ಞಾನಿಕ ಸತ್ಯಗಳು​~ ​ಡಾ.ರಾಮಚಂದ್ರ ಕಾಮತ್ ಮಣಿಪಾಲ  ​​

ಕೋವಿಡ್ ​2ನೆ ಅಲೆಯು ಯಾರೂ ಊಹಿಸದ ರೀತಿಯಲ್ಲಿ ಅಪ್ಪಳಿಸಿದ ಪರಿಣಾಮ ದೇಶದಲ್ಲಿ ಬಹಳಷ್ಟು ತೊಂದರೆಯಾಗಿದೆ. ಸಾಮಾನ್ಯ ಜನರು ಕೂಡ ತಮ್ಮ ಜೀವನ ಸಾಗಿಸಲು ಕಷ್ಟಪಡ ಬೇಕಾಗಿ ಬಂದಿದೆ. ಈ ಕೋವಿಡ್ ನ್ನು ದೂರಮಾಡುವಲ್ಲಿ ಲಸಿಕೆಯು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಚ್ 2020 ರಂದು ಕೋವಿಡ್-19 ಸಾಂಕ್ರಾಮಿಕ ರೋಗವು ಸರ್ವ ವ್ಯಾಪಿಯಾಗಿದೆ ಎಂದು ಘೋಷಿಸಿತು. ಹಲವಾರು ​ರಾಷ್ಟ್ರಗಳು  ವಿವಿಧ ರೀತಿಯ ತಡೆಗಟ್ಟುವ ವಿಧಾನಗಳನ್ನು ಅನುಸರಿಸುತ್ತಾ ಬಂದಿವೆ. 
 
ಅದರಲ್ಲಿ ಮುಖ್ಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವಿಕೆ, ನೈರ್ಮಲ್ಯತೆ, ಕ್ವಾರಂ ಟೈನ್, (ಮನೆ ಮತ್ತು ಸೆಂಟರ್ ಗಳಲ್ಲಿ), ನಾನಾ ತಪಾಸಣಾ ವಿಧಾನಗಳು, (ಆರ್.ಟಿ.ಪಿ.ಸಿ. ಆರ್, ಆರ್‌ಎ.ಟಿ)ವಿವಿಧ ರೋತೊಯ ಚಿಕಿತ್ಸಾ ವಿಧಾನಗಳು, ರ‍್ಯಾಂಮ್ ಡಿಸೀವರ್ ಸ್ಟಿರೋಯ್ಡ್), ವಿಟಮಿನ್ ಸಿ, ಜಿಂಕ್,​ ಮುಂತಾದವುಗಳು.

ಜಗತ್ತಿ​ನಾದ್ಯಂತ ಸಾರ್ವಜನಿಕರು ಲಸಿಕೆ ಬಂದರೆ ನಮ್ಮ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಭರವಸೆ ಇಟ್ಟಾಗ 292 ಲಸಿಕೆಗಳು ಸಂಶೋಧನಾ ಹಂತದಲ್ಲಿ ಮುಂದುವರೆದು 82 ಲಸಿಕೆಗಳು ತಮ್ಮ ಅಂತಿಮ ಹಂತದ ಸಂಶೋಧನಾ ಕಾರ್ಯಗಳನ್ನು ಮುಗಿಸಿ ಉತ್ಪಾದಿಸುವ ಹಂತವನ್ನು ತಲುಪಿತು. ಅದರಲ್ಲಿ ಸಹ ಕೇಂದ್ರ ಸರಕಾರವು ತ್ವರಿತ ಗತಿಯಲ್ಲಿ 2 ಉತ್ಪಾದಕರಿಗೆ​ ​(ಸೆರಂ ​​​​ಇನ್ಸಿಟ್ಯೂಟ್ ಪುಣೆ ಹಾಗೂ ಭಾರತ್ ಬಯೋಟೆಕ್ ಹೈದರಾಬಾದ್) ಅನುಮತಿಯನ್ನು ನೀಡಿ ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲಾಯಿತು. 
 
ನಮ್ಮ ದೇಶದ ಪ್ರಧಾನಮಂತ್ರಿಯವರ ಆಸಯದಂತೆ ಅತೀ ಹೆಚ್ಚು ಅಪಾಯವಿರುವ ಗುಂಪುಗಳಿಗೆ ಹಂತ ಹಂತವಾಗಿ ಲಸಿಕೆಯನ್ನು ನೀಡಲು ತೀರ್ಮಾನಿಸಲಾಯಿತು. ಜನವರಿ 16 ರಂದು ಲಸಿಕೆ ಆಂದೋಲನವನ್ನು ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ತದನಂತರ ಫ್ರಂಟ್ ಲೈನ್ ವಾರಿ​ಯರ್ಸ್ ರವರಿಗೆ (ಸೇನೆ, ಮುನ್ಸಿಪಲ್ ಕಾರ್ಮಿಕರು) ಎರಡನೇ ಹಂತದಲ್ಲಿ 45 ವರ್ಷ,50-60, 60ರ ನಂತರ ವಯೋಮಿತಿಯವರಿಗೆ ನೀಡಲಾಯಿತು.
 
ಯಾವುದೇ ವೈರಸ್ ವಿರುದ್ದ ಲಸಿಕೆಯನ್ನು ತಯಾರಿಸಲು 5-6 ವರ್ಷಗಳ ಸತತ ಸಂಶೋಧನೆ ಮತ್ತು ಪ್ರಯತ್ನದ ಅಗತ್ಯವಿದೆ. ಆದರೆ ಕೊರೋನಾ ಲಸಿಕೆಯನ್ನು ಅತ್ಯಂತ ತ್ವರಿತ ಗತಿಯಲ್ಲಿ6-8 ತಿಂಗಳಲ್ಲಿ ಕಂಡು ಹಿಡಿಯಲಾಯಿತು. ಎರಡು ಉತ್ಪಾದಕ ಘಟಕಗಳಿಗೆ ಅನುಮತಿಯನ್ನು ನೀಡಿ ಉತ್ಪಾದಿಸಲಾಯಿತು.
ನಮ್ಮ ದೇಶದಲ್ಲಿ ಲಸಿಕೆಯನ್ನು ನೀಡಿ ಅನೇಕ ಸಾಂಕ್ರಾಮಿಕ ರೋಗಗಳನ್ನು (ಬ್ಯಾಕ್ಟೀರಿಯಾ, ವೈರಸ್) ತಡೆಗಟ್ಟಿ ಮಕ್ಕಳನ್ನು ಆ ಮೂಲಕವಾಗಿ ರಕ್ಷಣೆ ಮಾಡಲಾಗಿದೆ, ಪೋಲಿಯೋ ಮುಂತಾದ ರೋಗಗಳನ್ನು ನಿರ್ಮೂಲನ ಮಾಡಿದ ಹೆಮ್ಮೆ ನಮಗಿದೆ.

ಕೇಂದ್ರ ಸರಕಾರವು ಲಸಿಕೆಯನ್ನು ಕ್ರಮ ಬದ್ದವಾಗಿ ನೀಡಲು ಅನೇಕ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಲಸಿಕೆ ನೀಡುವ ವಿಧಾನ, ಸ್ಥಳ, ಲಸಿಕೆಯ ಡೋಸ್, ಲಸಿಕೆಯ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಹಾಗೆಯೇ ಜನವರಿ 16ರಂದು ಪ್ರಥಮ ಲಸಿಕೆಯನ್ನು ನೀಡಿ ಈ ಕೋವಿಡ್ ವಿರುದ್ದ ಯುದ್ದ ಸಾರಿದೆ.
ಯಾವುದೇ ಹೊಸ ಯೋಜನೆ, ಹೊಸ ಲಸಿಕೆಯ ಯೋಜನೆಗಳು ಪ್ರಾರಂಭ ಮಾಡುವಾಗ ಸಾರ್ವಜನಿ ಕರಲ್ಲಿ ವೈಜ್ಞಾನಿಕ ಮಾಹಿತಿಯ ಕೊರತೆಯಿಂದ ಭಯ,​ ​ಆತಂಕ,​ ಸಂಶಯಗಳಿರುವುದು ಸರ್ವೇ ಸಾಮಾನ್ಯ. ಹಾಗೆಯೇ ಮಾರ್ಚ್ 16 ರಂದು ಸಾರ್ವಜನಿಕರಿಗೆ ಲಸಿಕೆಯನ್ನು ನೀಡಲು ಪ್ರಾರಂಭ ವಾದಾಗ ಅನೇಕರು ಅದರಲ್ಲಿಯೂ ಆರೋಗ್ಯ ಕಾರ್ಯಕರ್ತರು, ಲಸಿಕೆಯನ್ನು ಪಡೆಯಲು ಹಿಂಜರಿ ದರು. 
 
ಇದು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಆತಂಕ,​ಸಂಶಯವನ್ನು ಉಂಟು ಮಾಡಿತು.​ ಲಸಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅದರ ​ವಿವಿಧ ಡೋಸ್, ಅಂತರ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದ ನಂತರ ಜನರಲ್ಲಿ ಆತ್ಮ ವಿಶ್ವಾಸ ಮೂಡಿ ಜನರು ಲಸಿಕೆಯನ್ನು ಪಡೆಯಲು ಮುಂದಾದರು. ಈವರೆಗೆ ದೇಶದಲ್ಲಿ 17, 26, 33, 761 ಡೋಸ್ ಗಳನ್ನು ನೀಡಿ ಜನರನ್ನು ರಕ್ಷಿಸಿದಲ್ಲದೆ ಕರ್ನಾಟಕದಲ್ಲಿ 1, 16,30, 738 ಡೋಸ್ ನ್ನು ನೀಡಲಾಗಿದೆ.

ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ,​ ​ಶಾಲೆ,​ ​ಪಂಚಾಯತ್ ಮುಂತಾದ ಕಡೆ ಲಸಿಕಾ ಆಂದೋಲನವು ಸಮರ್ಪಕವಾಗಿ ನಡೆಯುತ್ತಿದ್ದು, ಈವರೆಗೆ ಲಸಿಕೆಯನ್ನು ಪಡೆದುಕೊಂಡವರಲ್ಲಿ ಸಾಮಾನ್ಯ ಅಡ್ಡ ಪರಿಣಾಮಗಳು ಮಾತ್ರ ಕಂಡು​ಬಂದಿದ್ದು ,​ ​(ಜ್ವರ, ಮೈಕೈನೋವು, ಸುಸ್ತು, ಲಸಿಕೆ ನೀಡಿದ ಸ್ಥಳದಲ್ಲಿ ನೋವು) ಯಾವುದೇ ತೀವ್ರ ತರದ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.  ಆದುದರಿಂದ ಈ ಸುರಕ್ಷಿತವಾದ ಲಸಿಕೆಯನ್ನು ಎಲ್ಲರೂ ಪಡೆದುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು.

ಈ ತರದ ಲಸಿಕಾ ಆಂದೋಲನವು ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಕೋವಿನ್, ಆಪ್ ಉಪಯೋಗಿ ಸಿ ಬಹಳ ಸಮರ್ಪಕವಾದ ರೀತಿಯಲ್ಲಿ ನಡೆದಿದೆ. ಇದರಲ್ಲಿ ಯು.ಎನ್.ಡಿ.ಪಿ, ​ ​ಡಬ್ಲೂ.ಎಚ್.ಒ, ಯುನಿಸೆಫ್ ಮುಂತಾದ ಅಂತ​ರಾಷ್ಟ್ರೀಯ  ಸಂಸ್ಥೆಗಳು ಈ ಲಸಿಕಾ ಆಂದೋಲನಾ ಉತ್ತಮ ರೀತಿಯಲ್ಲಿ ನಡೆಯುವಲ್ಲಿ ಬಹಳಷ್ಟು ಶ್ರಮ ಪಟ್ಟಿವೆ.​ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಸುಮಾರು ೧ಕೋಟಿ ಆರೋಗ್ಯ ಕಾರ್ತೆಯರು, 2 ಕೋಟಿ ಫ್ರಂಟ್ ಲೈನ್ ​ವಾರಿಯರ್ಸ್ ಹಾಗೂ 27 ಕೋಟಿ ವಿವಿಧ ವಯೋಮಾನದವರಿಗೆ ನೀಡಲು ಯೋಜನೆಯನ್ನು ಹಾಕಿ ಲಸಿಕೆಯನ್ನು  ನೀಡಲಾಯಿತು.

ಸಾರ್ವಜನಿಕರ ಪಾತ್ರ: –​ ಸಾರ್ವಜನಿಕರು ಬಹಳ ತಾಳ್ಮೆಯಿಂದ ಕೇಂದ್ರ ಸರಕಾರವು ಹಾಗೂ ರಾಜ್ಯ ಸರಕಾರದೊಂದಿಗೆ ಕೈಜೋಡಿಸಿ ಲಸಿಕೆಯನ್ನು ಪಡೆಯುವುದು ಸೂಕ್ತ. ಲಸಿಕೆಯ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ ನುರಿತ ತಜ್ಞರನ್ನು ಸಂಪರ್ಕಿಸಿ ತಮ್ಮಲ್ಲಿರುವ ಅನುಮಾನಗಳನ್ನು  ದೂರಮಾಡಿ ಕೊಳ್ಳಬೇಕು ವಿನಹ ಲಸಿಕೆಯ ಬಗ್ಗೆ ಯಾವುದೇ ಅಪನಂಬಿಕೆ, ತಪ್ಪು ಅಭಿಪ್ರಾಯಗಳನ್ನು ಇತರರಿಗೆ ನೀಡುವುದು ಸರಿಯಲ್ಲ. ಮಾಧ್ಯಮದವರು ನುರಿತ ತಜ್ಞರೊಂದಿಗೆ ಸಂವಾದವನ್ನು ಜಿಲ್ಲೆಯಿಂದ ಗ್ರಾಮ ಮಟ್ಟದಲ್ಲಿ ಏರ್ಪಡಿಸಿ ಜನರಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ನೀಡುವ ಕಾರ್ಯ ಮಾಡಬೇಕಾಗಿದೆ. 
 
ಆದುದರಿಂದ ನಮಗೆ ವ್ಯಾಕ್ಸಿನ್ ಬಗ್ಗೆ ಅಪನಂಬಿಕೆ ಬೇಡ ಅದರ ಬಗ್ಗೆ ವಿಶ್ವಾಸವಿರಲಿ. ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಲಸಿಕೆಯನ್ನು ಶೇಖರಣಾ ಹಾಗೂ ಸಾಗಾಟ ಹಂತದಲ್ಲಿ 2+೮ಡಿಗ್ರಿ.ಸೆ ಉಷ್ಣತೆಯನ್ನು ಕಾಪಾಡಿಕೊಂಡು ಲಸಿಕೆಯನ್ನು ನೀಡಲಾಗುವುದು. ಒಂದು ಲಸಿಕಾ ಬಾಟಲ್ ನ್ನು ತೆರೆದ ನಂತರ ಲಸಿಕೆಯನ್ನು 4 ಗಂಟೆಯ ಒಳಗೆ ಉಪಯೋಗಿಸಬೇಕು. ತದನಂತರ ಈ ಲಸಿಕೆ ಯನ್ನು ಉಪಯೋಗಿಸುವಂತಿಲ್ಲ.

ಮೊದಲನೆಯ ಡೋಸ್ ಕೋವಿಶೀಲ್ಡ್ ಪಡೆದರೆ ಅದೇ ಲಸಿಕೆಯನ್ನು ಪುನ: ಎರಡನೇ ಡೋಸ್ ಪಡೆಯಬೇಕು. ಕೋವಾಕ್ಸಿನ್ ಪಡೆದುಕೊಂಡವರು ಎರಡನೇ ಡೋಸ್ ನ್ನು ಇದೇ ಲಸಿಕೆಯನ್ನು ಪಡೆಯಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆಯ ನಂತರ ಬೇರೆ ಮಾರ್ಗಸೂಚಿಗಳು ಬರಬಹುದು. ಗರ್ಭಿಣಿ,​ ​ಬಾಣಂತಿಯರು, ಮಕ್ಕಳು ಸದಸ್ಯಕ್ಕೆ ಅರ್ಹರಲ್ಲ.

ಯಾರು ಲಸಿಕೆಯನ್ನು 4-8 ವಾರಗಳ ನಂತರ ಪಡೆಯಬಹುದು?

• ಕೊರೋನಾದ ಲಕ್ಷಣವಿರುವವರು​, • ಪ್ಲಾಸ್ಮಾ ತೆರಪಿ ಪಡೆದುಕೊಂಡವರು​, • ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ರೋಗಿಗಳು.

ಈ ಕೆಳಗಿನವರು ಲಸಿಕೆಯನ್ನು ಪಡೆಯಬಹುದು​: • ಕೊರೋನಾದಿಂದಗುಣಮುಖರಾದವರು.​ • ರಕ್ತದೊತ್ತಡ, ಮದುಮೇಹ, ಅಸ್ತಮಾ, ಹೆಚ್.ಐ.ವಿ ರೋಗಿಗಳು ಲಸಿಕೆಯನ್ನು ಪಡೆಯಬಹುದು.​ ಲಸಿಕೆಯನ್ನು ಪಡೆದೊಕೊಂಡವರು 14 ದಿನಗಳ ನಂತರ ರಕ್ತದಾನವನ್ನು ಮಾಡಬಹುದು. ಈ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಆದರೆ ಈಗಿನ ಸಂಶೋಧನೆಗಳ ಪ್ರಕಾರ ಕೋವಿಶೀಲ್ಡ್ ಲಸಿಕೆಯನ್ನು ೬ ವಾರದ ಒಳಗೆ ನೀಡಿದೆ ೫೩.೨% ಪರಿಣಾಮಕಾರಿ. 6-8ವಾರಗೊಳಗೆ ನೀಡಿದರೆ 51%. ಹಾಗೂ 9-11 ವಾರಗಳ ಅಂತರದಲ್ಲಿ ನೀಡಿದರೆ 60.8% ಪರಿಣಾಮಕಾರಿ ಎಂದು ತಿಳಿದು ಬಂದಿದೆ. 12 ವಾರಗಳ ನಂತರ 28.7% ಪರಿಣಾಮಕಾರಿ ಎಂದು ಸಂಶೋಧನೆ ತಿಳಿಸಿದೆ. ಆದುದರಿಂದ ಜನರು 6 ವಾರಗಳ ಅಂತರ ಮುಗಿಯಿತು ಎಂದು ಆತಂಕಗೊಳ್ಳುವ ಅವಶ್ಯಕತೆ ಇಲ್ಲ.
 
 ಈ ಬಗ್ಗೆ ಇತ್ತೀಚೆಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.​ ಜನರು ಇಲ್ಲ ಸಲ್ಲದ ಊಹಪೋಹಗಳಿಗೆ ಬಲಿಯಾಗದೇ ವೈಜ್ಞಾನಿಕ ಕಾರಣಗಳನ್ನು ಮಾತ್ರ ಗಮನಕ್ಕೆ ತೆಗೆದುಕೊಳ್ಳಬೇಕು, ಲಸಿಕೆ ಪಡೆದ ನಂತರ ದೇಹದಲ್ಲಿ ಪ್ರತಿಕಾಯಗಳು, (ಯಾಂಟಿ ಬಾಡಿಸ್) ಉತ್ಪಾದನೆ ಯಾಗುತ್ತದೆ. ಕೋವಿಶೀಲ್ಡ್ ಪಡೆದು ಒಂದು ತಿಂಗಳ ನಂತರ 93.7% ಹಾಗೂ 2 ತಿಂಗಳ ನಂತರ 97.04% ಯಾಂಟಿ ಬಾಡಿಸ್ ಉತ್ಪಾದನೆ ಯಾಗಿ ತುಂಬಾ ಪರಿಣಾಮಕಾರಿಯಾಗಿರುತ್ತದೆ.

ಇನ್ನೂ ಲಸಿಕೆಗಳು ಅಂತ​ರಾಷ್ಟ್ರೀಯ  ಮಟ್ಟದಲ್ಲಿ ಲಭ್ಯವಿದೆ.​ ​ನಮ್ಮ ದೇಶಕ್ಕೆ ಬರುವಲ್ಲಿ ಅನುಮತಿಯ ಮೇರೆಗೆ ಲಭ್ಯವಿರುವ ಸಾಧ್ಯತೆ ಇದೆ. ಸ್ಫುಟ್ನಿಕ್ ಜಾನ್ಸನ್ ಮತ್ತಯ ಜಾನ್ಸನ್, ನೋವಾಕ್ಸ್, ಮುಂತಾದ ಲಸಿಕೆಗಳು ಈಗಾಗಲೆ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಬಳಕೆಯಲ್ಲಿದೆ.​ 
ಕೊರೋನಾ ಒಂದು ಆರೋಗ್ಯಕ್ಕೆ ಸಂ​ಬಂಧಪಟ್ಟ ಎಮರ್ಜನ್ಸಿ. ಯಾವುದೇ ವಿಕೋಪಗಳು ಸಂಭವಿಸಿ ದಾಗ ಹೇಗೆ ಜನರು ಜಾತಿ, ಮತ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದ ಹಾಗೆ ಕೊರೋನಾ ವಿಷಯದಲ್ಲಿ ಚಿಕಿತ್ಸೆ ನೀಡುವಲ್ಲಿ, ಲಸಿಕೆ ನೀಡುವುದರಲ್ಲಿ ಪಕ್ಷ ಭೇದವಿಲ್ಲದೆ ಸಹಕರಿಸ ಬೇಕಾಗಿದೆ.

ನಮ್ಮ ದೇಶದಲ್ಲಿ ವಿಜ್ಞಾನಿಗಳ ಪ್ರಯತ್ನದ ಫಲವಾಗಿ ಈ ಲಸಿಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ಮೂಡಿ ಬಂದಿದೆ. ನಮ್ಮ ದೇಶದ ಲಸಿಕೆ ವಿಶ್ವದ ಇತರ ​ರಾಷ್ಟ್ರಗಳಿಗೆ  ರಫ್ತಾಗಿರುವುದು ಹೆಮ್ಮೆಯ ವಿಚಾರ. ಈ ಬಗ್ಗೆ ಎಲ್ಲರೂ ಏಕ ಮನಸಿನಿಂದ ಈ ಲಸಿಕೆಯನ್ನು ಸ್ವಾಗತಿಸಬೇಕಾಗಿದೆ.
ಈ ವಿಚಾರದಲ್ಲಿ ರಾಜಕೀಯ ತರುವುದು ಸೂಕ್ತವಲ್ಲ. ಒಟ್ಟಾಗಿ ಈ ಲಸಿಕೆಯು ಈ ಕೊರೋನಾ ಮಹಾಮಾರಿಯನ್ನು ದೂರ ಮಾಡುವಲ್ಲಿ ತನ್ನದೇ ಆದ ವಿಶಿಷ್ಟ ಪಾತ್ರವನ್ನು ವಹಿಸುತ್ತಿದೆ. ಕೊನೆಯದಾಗಿ ಆದಷ್ಟು ಬೇಗ ಈ ಕೊರೋನಾ ವಿಶ್ವದಿಂದಲೇ ದೂರವಾಗಲಿ.
ಮತ್ತೊಮ್ಮೆ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಆರೋಗ್ಯ  ಮೂಡಲಿ ಎಂಬುದು ನಮ್ಮೆಲ್ಲರ ಆಶಯ.ಆರೋಗ್ಯವೇ ಭಾಗ್ಯ.

 

 
 
 
 
 
 
 
 
 
 
 

Leave a Reply