ನೃತ್ಯ ರಸಗ್ರಹಣ ಕಾರ್ಯಾಗಾರ

ನೃತ್ಯವು ಒಂದು ಅನನ್ಯವಾದ ಭಾಷೆ.ಅದು ವಿಶಿಷ್ಟ ಸಂವಹನ ಮಾಧ್ಯಮ.ಶಿಕ್ಷಕರು ಪಾಠಬೋಧನೆಯ ಸಂದರ್ಭದಲ್ಲಿ ತಾವು ಕಲಿಸುವ ವಿಷಯವನ್ನು ನೃತ್ಯ ವಿನ್ಯಾಸಗಳಿಗೆ ಸೂಕ್ತ ರೀತಿಯಲ್ಲಿ ಅಳವಡಿಸಬಹುದು ಇಲ್ಲವೆ ಶರೀರ ಭಾಷೆಯನ್ನು ಬಳಸಬಹುದು” ಎಂದು ಮಣಿಪಾಲದ ಹೆಜ್ಜೆಗೆಜ್ಜೆಯ ಸಂಸ್ಥಾಪಕಿ ಹಾಗೂ ಉಡುಪಿಯ ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀ ಮತಿ ಯಶಾ ರಾಮಕೃಷ್ಣ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಿದ್ದ ನೃತ್ಯ ರಸಗ್ರಹಣ ಕಾರ್ಯಾಗಾರದಲ್ಲಿ ನುಡಿದರು.ಅವರು ನೃತ್ಯಾಭ್ಯಾಸದಿಂದ ಒದಗುವ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟು ದಶ ವಿಧ ಅಡವುಗಳ ಬಗ್ಗೆ ಮಾಹಿತಿ ನೀಡಿ ಅಲರಿಪು, ಜತಿಸ್ವರ, ವರ್ಣ, ಪದಂ,ತಿಲ್ಲಾನಗಳ ಮಹತ್ತ್ವವನ್ನು ಸೋದಾಹರಣ ಪರಿಚಯಿಸಿದರು. ಶ್ರೀ ಮತಿ ಯಶಾ ರಾಮಕೃಷ್ಣ ಮತ್ತು ಅವರ ಶಿಷ್ಯೆಯರಾದ ಕಾವ್ಯ,ಸ್ಮಿತಾ, ರಂಜನಿ ಮತ್ತು ರಕ್ಷಾ ನೃತ್ಯದ ವಿವಿಧ ಅಂಗಗಳಿಗೆ ಸಂಬಂಧಪಟ್ಟಂತೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಸ್ವಾಗತಿಸಿ ಅಭ್ಯಾಗತರನ್ನು ಪರಿಚಯಿಸಿದರು. ಕುಮಾರಿ ಅಕ್ಷತಾ ಸ್ಮರಣಿಕೆ ನೀಡಿದರೆ ಕುಮಾರಿ ಪೂರ್ಣಿಮಾ ವಂದನಾರ್ಪಣೆ ನೆರವೇರಿಸಿದರು.

 
 
 
 
 
 
 
 
 
 
 

Leave a Reply