ಉಡುಪಿ ರೋಟರಿಯಿಂದ ಎಸ್ಸೆಸ್ಸಲ್ಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಉಪಹಾರ

ಉಡುಪಿ: ಎಸ್ಸೆಸ್ಸಲ್ಸಿ ಪರೀಕ್ಷೆಯು ಎರಡು ದಿನಗಳಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಒಂದೂವರೆ ಗಂಟೆ ವರೆಗೆ ನಡೆದಿತ್ತು. ಬೆಳಿಗ್ಗೆ ದೂರದಿಂದ ಬರುವ ಮಕ್ಕಳು ಅಲ್ಲದೇ, ಪರೀಕ್ಷೆ ಮುಗಿದ ನಂತರ ಮನೆಗೆ ತಡವಾಗಿ ಹೋಗುವ ಸಂಭವವಿರುವುದರಿಂದ ಮಕ್ಕಳಿಗೆ ಊಟ ಅಥವಾ ತಿಂಡಿಯ ಯಾವುದೇ ವ್ಯವಸ್ಥೆ ಇಲ್ಲದೇ ಇರುವ ಕಾರಣ, ರೋಟರಿ ಉಡುಪಿಯ ವತಿಯಿಂದ ಉಪಹಾರ ನೀಡಲಾಯಿತು.

ಕಡಿಯಾಳಿ ಹೈಸ್ಕೂಲ್ , ಸೌತ್ ಸರಕಾರಿ ಹೈಸ್ಕೂಲ್ , ಬೋರ್ಡ ಹೈಸ್ಕೂಲ್ ಮತ್ತು ಮಲ್ಪೆಯ ಸರಕಾರಿ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಲಘು ಉಪಹಾರ ಕೊಡುವ ಮೂಲಕ ಮಕ್ಕಳ ಹಸಿವು ನೀಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ರೋಟರಿ ಅದ್ಯಕ್ಷ ರೋ.ಹೇಮಂತ್, ಸಹಾಯಕ ಗವರ್ನರ್ ರೋ.ಡಾ.ಸುರೇಶ್ ಶೆಣೈ,ಕಾರ್ಯದರ್ಶಿ ರೋ.ಗೋಪಾಲಕೃಷ್ಣ ಪ್ರಭು, ಸಮಾಜಸೇವಾ ನಿರ್ಧೆಶಕ ರೋ.ರಾಮಚಂದ್ರ ಉಪಾಧ್ಯಾಯ, ರೋ.ಗುರುರಾಜ ಭಟ್ ಮತ್ತು ರೋ.ಅನಂತರಾಮ ಬಲ್ಲಾಳ ಉಪಸ್ಥಿತರಿದ್ದರು. ಶಾಲಾಮುಖ್ಯಸ್ಥ ಗಣೇಶ ಮೂರ್ತಿ ಹೆಬ್ಬಾರ್, ಸಂಧ್ಯಾ ಪ್ರಭು, ನಿರ್ಮಲಾ ರಾವ್, ಸುರೇಶ್ ಭಟ್ ಮತ್ತಿತರರು ಉಪಹಾರ ನೀಡಿದ ಬಗ್ಗೆ ರೋಟರಿ ಉಡುಪಿಯನ್ನು ಅಭಿನಂದಿಸಿ ಕೃತಜ್ಞತೆ ಅರ್ಪಿಸಿದರು.

 
 
 
 
 
 
 
 
 
 
 

Leave a Reply