ಶಂಕರನಾರಾಯಣ : ಅಡಿಕೆ ಸಿಪ್ಪೆ ಕದ್ದ ಕಳ್ಳರ ಬಂಧನ

ದಿನಾಂಕ 18/12/2023 ರಂದು ಶಂಕರನಾರಾಯಣ ಪೊಲೀಸ್ ಠಾಣಾ ಸರಹದ್ದಿನ ಅಂಪಾರು ಗ್ರಾಮದ ನೈಲಕೊಂಡ ಎಂಬಲ್ಲಿರುವ ಕೆ. ಉಮೇಶ ರವರ ಮನೆಯ ಅಂಗಳದಲ್ಲಿ ಒಣಗಿಸಿದ್ದ ಸುಮಾರು 1,00,000/- ರೂ, ಮೌಲ್ಯದ ಸುಮಾರು 16 ಚೀಲದಷ್ಷು ಸಿಪ್ಪೆ ಅಡಿಕೆ(480 ಕೆ.ಜಿ)ಯನ್ನು ಯಾರೋ ಕಳ್ಳರು ದಿನಾಂಕ 14.12.2023 ರಂದು ಬೆಳಗಿನ ಜಾವ 04:05 ಗಂಟೆಯಿಂದ 05:00 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2023 ಕಲಂ 379 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಶಂಕರನಾರಾಯಣ ಠಾಣಾ ಪಿ.ಎಸ್. ಐ ಶ್ರೀ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಯಗಳು, ಕುಂದಾಪುರ ಗ್ರಾಮಾಂತರ ಠಾಣಾ ಅಧಿಕಾರಿ ಸಿಬ್ಬಂದಿಗಳು ಹಾಗೂ ಅಮಾಸೆಬೈಲು ಠಾಣಾ ಅಧಿಕಾರಿ ಸಿಬ್ಬಂದಿಯವರು ದಿನಾಂಕ 05/01/2024 ರಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ 1) ಇಮ್ರಾನ್ ಪ್ರಾಯ 19 ವರ್ಷ, ತಂದೆ: ಜಬ್ಬರ್, ಕಾವ್ರಾಡಿ ಗ್ರಾಮ 2) ಖಾಜಾ ಅಖೀಬ್ ಪ್ರಾಯ 19 ವರ್ಷ, ತಂದೆ: ಮಹಮ್ಮದ್ ಅಖೀಲ್, ಕಂಡ್ಲೂರು, ಕಾವ್ರಾಡಿ ಗ್ರಾಮ 3) ಮುಝಾಫರ್ ಪ್ರಾಯ 26 ವರ್ಷ, ತಂದೆ: ಶಬ್ಬೀರ್, ಕಾವ್ರಾಡಿ ಗ್ರಾಮ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳು ಕಳವು ಮಾಡಿ ಮಾರಾಟ ಮಾಡಿದ್ದ ಸುಮರು 1.08 ಕ್ವಿಂಟಲ್ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಒಂದು ಸ್ಕೂಟರ್ ಒಟ್ಟು ಅಂದಾಜು ಮೌಲ್ಯ 5,28,000/- ರೂ ಸದ್ರಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಸದ್ರಿ ಆರೋಪಿಗಳಿಗೆ ನ್ಯಾಯಾಂಗ ಬಂದನ ವಿಧಿಸಿರುತ್ತದೆ.

 
 
 
 
 
 
 
 
 
 
 

Leave a Reply