“ಇಗ್ನಿಸಿಸ್ ಇನ್ ಸೈಟ್ಸ್-೨೩” ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿದ್ಯಾರ್ಥಿಗಳಿಂದ ಉತ್ಪನ್ನಗಳ ಮಾರುಕಟ್ಟೆ ಕಾರ್ಯಕ್ರಮ

ತೆಂಕನಿಡಿಯೂರು : ಬದಲಾಗುತ್ತಿರುವ ಕಾಲಮಾನದಲ್ಲಿ ತಂತ್ರಜ್ಞಾನ ಉತ್ಪನ್ನ, ಗ್ರಾಹಕರ ಆಯ್ಕೆ ಮತ್ತು ಮಾರುಕಟ್ಟೆಯಲ್ಲಿನ ಸ್ಪರ್ಧೆ, ಉದ್ಯಮದಲ್ಲಿನ ಮಾರುಕಟ್ಟೆ ನೀತಿ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಉತ್ಪನ್ನಗಳನ್ನು
ಮಾರುಕಟ್ಟೆ ಮಾಡುವಲ್ಲಿ ಪ್ರಭಾವ ಬೀರುತ್ತವೆ. ಪ್ರತಿಯೊಬ್ಬ ಉದ್ಯಮಿಯು ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳು ಗ್ರಾಹಕರಿಂದ ತಿರಸ್ಕೃತಗೊಳ್ಳಬಹುದೆಂಬ
ಭಯ ಮತ್ತು ಅದರ ಪೂರ್ವ ತಯಾರಿಯನ್ನು ಹೊಂದಿರಬೇಕು ಎಂದು ಪ್ರಾಂಶುಪಾಲರಾದ ಪ್ರೊಫೇಸರ್ ಸುರೇಶ್ ರೈ ಕೆ. ನುಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ವಿಭಾಗದವರು ಆಯೋಜಿಸಿದ ಅಂತರ್ ತರಗತಿ ಮ್ಯಾನೇಜ್ಮೆಂಟ್ ಫೆಸ್ಟ್ “ಇಂಜಿನಿಯಸ್ ಇನ್ ಸೈಡ್ಸ್-೨೩” ಉದ್ಘಾಟಿಸಿ ಮಾತನಾಡಿದರು.

ವ್ಯವಹಾರಶಾಸ್ತ್ರವಿಭಾಗ ಮುಖ್ಯಸ್ಥ ಡಾ. ರಘು ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ ಇವರು ಸ್ಪರ್ಧೆಯ
ರೂಪರೇಷೆ ಮತ್ತು ನಿಯಮ ನಿಬಂಧನೆಗಳನ್ನು ತಿಳಿ ಹೇಳಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇಮಿ ಮಿರಾಂದ, ಕಾರ್ಯಕ್ರಮದ ಸಂಚಾಲಕಿ ಶ್ರೀಮತಿ ಸ್ಮಿತಾ ಹಾಗೂ ಸ್ಪರ್ಧೆಯ ನಿರ್ಣಯಕರು ಹಾಗೂ ಮುಖ್ಯ ಅತಿಥಿಗಾಳದ ಶ್ರೀ
ಹರಿಕೇಶವ ಎಂ.ವಿ. ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು,
ಉಡುಪಿ, ಶ್ರೀ ರಾಮಕೃಷ್ಣ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಹಾಗೂ ಉಜ್ವಲ್ ಮಾಹೆ ಮಣಿಪಾಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಿ.ಕಾಂ. ಮತ್ತು ಬಿ.ಬಿ.ಎ. ತರಗತಿಗಳ ೧೪ ತಂಡಗಳು ವಿವಿಧ ರೀತಿಯ ಮಸಾಲಾ ಪೌಡರ್, ಸೆನ್ಸರ್ ವಾಚುಗಳು, ತಂಪುಪಾನೀಯ, ಸೋಪುಗಳು, ಪ್ರಕೃತಿಗೆ
ಅನುಕೂಲವಾಗುವ ಚಹಾ ಕುಡಿಯುವ ಕಪ್ ಇತ್ಯಾದಿ ಉತ್ಪನ್ನಗಳ ಮಾರುಕಟ್ಟೆಯ ಪ್ರಾತ್ಯಕ್ಷಿತ ಸ್ಪರ್ಧೆ ನಡೆಸಿಕೊಟ್ಟರು.

ಉಪನ್ಯಾಸಕರಾದ ಶ್ರೀ ವೆಂಕಟೇಶ್ ಭಟ್ ಸ್ವಾಗತಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿಗಳು ಪ್ರಾರ್ಥನೆ ಗೈದರು. ರುಡ್ವಿನ್ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply