ಸಂಪ್ರದಾಯದಂತೆ ಉಡುಪಿ ಶ್ರೀಕೃಷ್ಣ ಲೀಲೋತ್ಸವ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸೆಪ್ಟೆಂಬರ್ 10ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಂಪ್ರದಾಯದಂತೆ, ಧಾರ್ಮಿಕ ವಿಧಿ-ವಿಧಾನಗಳನುಸಾರ ನಡೆಸ ಲಾಗುತ್ತದೆ. ಆದರೆ ಸೆ. 11ರಂದು ವಿಟ್ಲಪಿಂಡಿ ಆಚರಣೆ ಮಾತ್ರ ಜಿಲ್ಲಾಡಳಿತದ ನಿರ್ದೇಶನ ದಂತೆ ಮಾಡಲಾಗುವುದು ಎಂದು ಪರ್ಯಾ ಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಹೇಳಿ ದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಮೀಜಿ ಈ ವಿಷಯ ತಿಳಿಸಿ ದರು. ಸೆ. 10ರಂದು ಕೃಷ್ಣ ಜನ್ಮಾಷ್ಟಮಿ ಯಂದು ಮಧ್ಯರಾತ್ರಿ 12.16ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಬೆಳಗ್ಗೆ ಮಹಾಪೂಜೆ, ನೈವೇದ್ಯ, ವಿಶೇಷ ಪೂಜೆ ಇತ್ಯಾದಿಗಳೆಲ್ಲವೂ ಮಠದೊಳಗೆ ನಡೆಯು ತ್ತದೆ. ಆದ್ದರಿಂದ ಅದನ್ನು ಸಂಪ್ರದಾಯದಂತೆ ನಡೆಸಲಾಗುತ್ತದೆ.

ಮರುದಿನ ಸೆ. 11ರಂದು ವಿಟ್ಲ ಪಿಂಡಿ ಉತ್ಸವ (ಕೃಷ್ಣ ಲೀಲೋತ್ಸವ)ವು ಮಠದ ಹೊರಗೆ ರಥಬೀದಿಯಲ್ಲಿ ನಡೆಯುತ್ತದೆ. ಅಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿಟ್ಲ ಪಿಂಡಿ ಉತ್ಸವ ಮಾಡಲು, ಜಿಲ್ಲಾಡಳಿತದೊಂದಿಗೆ ನಿಯಮಗಳನ್ನು ಕೇಳುತ್ತೇವೆ. ಅಧಿಕಾರಿ ಗಳನ್ನು ಭೇಟಿಯಾಗಿ, ಈ ಬಗ್ಗೆ ಚರ್ಚಿಸಿ, ಜಿಲ್ಲಾಡಳಿತದ ಸೂಚನೆಯಂತೆ ಆಚರಿಸಲಾಗುತ್ತದೆ ಎಂದು ಪರ್ಯಾಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ತಿಳಿಸಿದರು

 
 
 
 
 
 
 
 
 

Leave a Reply