ರಂಗಚಟುವಟಿಕೆಗಳಿoದ ಪ್ರತಿಭಾ ಉನ್ನತಿ ಸಾಧ್ಯ: ಸುಕನ್ಯಾ ಮಾರ್ಟಿಸ್

ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಸಂಸ್ಕೃತಿಯ ಜೀವಾಳ.
ಯುವಮನಸ್ಸುಗಳು ಇಂತಹ ಚಟುವಟಿಕೆಗಳಲ್ಲಿ ಅಸಕ್ತಿಯನ್ನು ಬೆಳೆಸಿಕೊಂಡಾಗ
ಅವಕಾಶಗಳೂ ಮುಕ್ತವಾಗಿ ಲಭಿಸುತ್ತದೆ. ನಾಟಕವೂ ಸೇರಿದಂತೆ ಬಹು ಆಯಾಮದ
ರಂಗಚಟುವಟಿಕೆಗಳು ಪ್ರತಿಭಾ ಉನ್ನತಿಗೆ ಸಹಕರಿಸುತ್ತದೆ ಎಂದು ಉಡುಪಿ
ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮಾರ್ಟಿಸ್ ತಿಳಿಸಿದರು.
ಅವರು ಬುಧವಾರ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಸುಮನಸಾ ಕೊಡವೂರು
ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಿದ್ಧಪಡಿಸಿದ
ಅರುಂಧತಿ ಆಲಾಪ ನೂತನ ರಂಗ ಪ್ರಯೋಗ ಪ್ರದರ್ಶನದ ಸಭಾ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಲಾವಿದರ
ಸೃಜನಶೀಲತೆಯನ್ನು ವಿಕಸನಗೊಳಿಸುವ ಕಾರ್ಯದಲ್ಲಿ ಸುಮನಸಾ ಸಂಸ್ಥೆಯ
ಸಾರ್ಥಕ ಪ್ರಯತ್ನಗಳ ಕುರಿತು ಅಭಿಮಾನವಿದೆ. ಈ ಸಾಲಿನಲ್ಲಿ ವಿಶೇಷವಾಗಿ ಸಜ್ಜುಗೊಂಡ
ಮಹಿಳಾ ಪ್ರಾಧನ್ಯವಾದ ಅರುಂದತಿ ಆಲಾಪ ನಾಟಕ ಬಹುಮನ್ನಣೆ ಪಡೆಯಲಿ ಎಂದು ಶುಭ
ಹಾರೈಸಿದರು. ಸುಮನಸಾ ಗೌರವಾಧ್ಯಕ್ಷ ಎಂ.ಎಸ್.ಭಟ್ ಮಾತನಾಡಿ ಯುವಪೀಳಿಗೆ
ಕ್ರಿಯಾಶೀಲವಾಗಿ ಸಂಸ್ಥೆಯ ಉದ್ದೇಶಗಳೊಂದಿಗೆ ಬದ್ದರಾಗಿರುವುದು ಸಂತಸದ
ಸoಗತಿ. ಇವರೆಲ್ಲರಿಗೂ ಸದಾ ಒಳಿತಾಗಲಿ ಎಂದರು. ಸುಮನಸಾ ಸಂಚಾಲಕ ಭಾಸ್ಕರ ಪಾಲನ್,
ನಾಟಕ ನಿರ್ದೇಶಕ ನಿತೀಶ್ ಕೋಟ್ಯಾನ್, ಬಂಟ್ವಾಳ ಉಪಸ್ಥಿತರಿದ್ದರು. ಸುಮನಸಾ ಅಧ್ಯಕ್ಷ
ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಯೋಗೀಶ್ ಕೊಳಲಗಿರಿ
ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಕಾoತ್ ಕುಂದರ್ ಕಲ್ಮಾಡಿ ವಂದಿಸಿದರು.

 
 
 
 
 
 
 
 
 
 
 

Leave a Reply