ಉಡುಪಿ: ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಡಿಸೆಂಬರ್ 6 ಮತ್ತು 8 ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿAದ ಹೊರಡುವ 11ಕೆ.ವಿ ಫೀಡರ್ ಗಳಾದ ಮುಂಡ್ಕೂರು ,ನಂದಳಿಕೆ ಮತ್ತು ಬೆಳ್ಮಣ್ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿoದ ಸದರಿ ಫೀಡರ್‌ಗಳಲ್ಲಿ ಬೆಳ್ಮಣ್, ಗೋಳಿಕಟ್ಟೆ, ನೀಚಾಲು,
ಬೆಳ್ಮಣ್ ದೇವಸ್ಥಾನ, ನಂದಳಿಕೆ, ಜಂತ್ರ, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ತಾರ್, ಜಾರಿಗೆಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ
ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11 ಕೆವಿ ಹೆಬ್ರಿ ವಿದ್ಯುತ್ ವಿತರಣಾ ಕೇಂದ್ರದಿoದ ಹೊರಡುವ 11ಕೆವಿ ಬೇಳೆಂಜೆ ಪೀಡರ್‌ನಲ್ಲಿ ಬೇಳೆಂಜೆ ಮಾರ್ಗದ ಮಾರ್ಗನಿರ್ವಹಣಾ ಕಾಮಗಾರಿ ಹಾಗೂ ವ್ಯವಸ್ಥೆ ಸುಧಾರಣಾ ಕಾಮಗಾರಿ ಹಮ್ಮಿಕೊಂಡಿರುವುದರಿAದ ಬೆಳೆಂಜೆ, ಮಡಾಮಕ್ಕಿ,
ಕಾಸನಮಕ್ಕಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11ಕೆ.ವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿoದ ಹೊರಡುವ 11 ಕೆ.ವಿ ಅಂಪಾರು, ಬಳ್ಕೂರು ಮತ್ತು ಜಪ್ತಿವಾಟರ್ ಸಫ್ಲೆöÊ ಮಾರ್ಗಗಳಲ್ಲಿ ಟ್ರೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಅಂಪಾರು,
ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೋಣಿ, ಬಳ್ಕೂರು, ಕಂಡ್ಲೂರು, ಮೂಡ್ಲಕಟ್ಟೆ, ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಸ್ಥಾವರ, ಬಸ್ರೂರು, ಆನಗಳ್ಳಿ ಮತ್ತು ಕಂದಾವರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ
ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಉಡುಪಿ ಶಾರದ ಕಲ್ಯಾಣ ಮಂಟಪ ರಸ್ತೆ ಅಗಲೀಕರಣಕ್ಕಾಗಿ 33/11ಕೆವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿoದ ಹೊರಡುವ 11ಕೆವಿ ಉಡುಪಿ-2, ಉಡುಪಿ-3 ಮತ್ತು ಕೃಷ್ಣಮಠ ಫೀಡರಿನ ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿ ಹಮ್ಮಿಕೊಂಡಿರುವುದರಿAದ
ಉಡುಪಿ ನಗರ ಪ್ರದೇಶಗಳಾದ ಕಿನ್ನಿಮುಲ್ಕಿ, ಮಿಷನ್ ಕಂಪೌoಡ್, ಅಜ್ಜರಕಾಡು, ಚಂದು ಮೈದಾನ ಕೋರ್ಟ್ ರಸ್ತೆ, ತೆಂಕಪೇಟೆ, ಕೆ.ಎಂ.ಮಾರ್ಗ, ಮಾರುತಿ ವಿಥೀಕಾ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಶಾರದ ಕಲ್ಯಾಣ ಮಂಟಪ, ಬೈಲಕೆರೆ, ವಾದಿರಾಜ ಕ್ರಾಸ್ ರೋಡ್, ಕೃಷ್ಣ ಮಠ ಪಾರ್ಕಿಂಗ್ ಏರಿಯಾ, ಶಾರದ ನಗರ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಡಿಸೆಂಬರ್ 8 ರಂದು 110ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿAದ 110ಕೆವಿ ಕೇಮಾರ್ ಬೇ, ಪಿಟಿ ಬೇ, ಪರಿವರ್ತಕ- 1 ಬೇ, ಹಿರಿಯಡ್ಕ ಬೇ, ಪರಿವರ್ತಕ- 2 ಬೇ, ಪರಿವರ್ತಕ 1 & 2 ಮತ್ತು ಎಲ್ಲಾ 11ಕೆವಿ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕೆಲಸ ಮತ್ತು
ನಿಯತಕಾಲಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿoದ ಸದರಿ 110ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿAದ ಹೊರಡುವ ಎಲ್ಲಾ 11ಕೆವಿ ಮಾರ್ಗಗಳಾದ ಕಾರ್ಕಳ ಟೌನ್, ಟಿ.ಎಮ್.ಸಿ., ಅಜೆಕಾರ್, ಬೈಲೂರು ಎಕ್ಸ್ ಪ್ರೆಸ್, ಮುಂಡ್ಲಿ, ಜಾರ್ಕಳ, ಕೆ.ಎಚ್.ಬಿ., ನಕ್ರೆ,
ಪದವು ಮತ್ತು ಬಂಡಿಮಠ ಫೀಡರ್‌ಗಳಲ್ಲಿ ತೆಳ್ಳಾರು, ಪಲಾಯಿಪಕ್ಯಾರು, ಕಜೆ, ಪೊಲ್ಲಾರು, ಉದ್ದಪಲ್ಕೆ, ಕಲ್ಲೊಟ್ಟೆ, ಪೆರ್ವಾಜೆ, ಗುಂಡ್ಯಡ್ಕ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಅಯ್ಯಪ್ಪನಗರ, ಪಿಲಿಚಂಡಿ ಸ್ಥಾನ, ಗಣಿತನಗರ, ಮಲೆಬೆಟ್ಟು,
ಕಡಂಬಳ, ಅಜೆಕಾರು, ಅಂಡಾರು, ಕಡ್ತಲ, ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ, ಎಣ್ಣೆಹೊಳೆ, ಜಾರ್ಕಳ, ಕುಕ್ಕುಂದೂರು, ಬೈಲೂರು ಟೌನ್, ನೀರೆ, ಕೌಡೂರು, ನಕ್ರೆ, ಪರಪ್ಪು, ಪದವು, ಕುಂಟ್ಟಾಡಿ, ಬೊರ್ಗಲ್ ಗುಡ್ಡೆ, ಕಲ್ ಕಾರ್, ಟಿ.ಎಮ್.ಸಿ., ಕಾರ್ಕಳ ಟೌನ್, ಮುಂಡ್ಲಿ, ಜಾರ್ಕಳ, ದುರ್ಗ, ಬಂಡಿಮಠ, ಬಂಗ್ಲೆಗುಡ್ಡೆ, ಟಿ.ಎಂ.ಸಿ. ವಾಟರ್ ಸಫ್ಲೆ, ಕೆ,ಹೆಚ್,ಬಿ. ಕೊಲೋನಿ, ಜೋಡುರಸ್ತೆ, ಹಿರ್ಗಾನ
ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು,
ಸಂಬoಧಪಟ್ಟ ಗ್ರಾಹಕರು ಮೆಸ್ಕಾಂನೊoದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply