ಯುವಜನತೆಯ ಸಕಾರಾತ್ಮಕ ಚಿಂತನೆಗಳು ಸಮಾಜವನ್ನು ಸದೃಢವಾಗಿಸುತ್ತವೆ- ಶ್ರೀಮತಿ ಸುಮಾ

ಉಡುಪಿ:ಎನ್ ಎಸ್ ಎಸ್ ಸೇವಾ ಶಿಬಿರಗಳು ಯುವಜನತೆಯ ವ್ಯಕ್ತಿತ್ವ ವಿಕಸನಕ್ಕೆ ಸೂಕ್ತ ವೇದಿಕೆಯನ್ನೊದಗಿಸುತ್ತವೆ.ಮಹಿಳೆಯರು ಮತ್ತು ಪುರುಷರು ಒಬ್ಬರನ್ನೊಬ್ಬರು ಗೌರವಿಸಿಕೊಂಡು ಬದುಕುವುದರಿಂದ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ.”
ಎಂದು ಕಾಪು ಠಾಣೆಯ ಪೋಲಿಸ್ ಉಪನಿರೀಕ್ಷರಾದ ಶ್ರೀಮತಿ ಸುಮಾ ಅವರು ಅಭಿಪ್ರಾಯ ಪಟ್ಟರು.ಅವರು ಇನ್ನಂಜೆಯ ಎಸ್.ವಿ.ಹೆಚ್ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಮಹಿಳಾ ಸಬಲೀಕರಣ ಘಟಕವು ಜಂಟಿಯಾಗಿ ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಮತ್ತು ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿದರು.ಎಸ್.ವಿ.ಹೆಚ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊ.ಅನಂತ ಮುಡಿತ್ತಾಯ, ಎಸ್.ವಿ.ಹೆಚ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪುಂಡರಿಕಾಕ್ಷ ಕೊಡಾಂಚ,ಎಸ್.ವಿ.ಹೆಚ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಮತಾ, ಸಂಧ್ಯಾ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಶ್ರೀಮತಿ ಲವಿಟ ಡಿಸೋಜ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್. ಎಸ್.ಎಸ್. ಯೋಜನಾಧಿಕಾರಿಗಳಾದ ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ಚಿರಂಜನ್ ಕೆ.ಶೇರಿಗಾರ್ ವಂದಿಸಿದರು. ಸ್ವಯಂ ಸೇವಕರಾದ ದೀಪಕ್ ಕಾಮತ್ ಎಳ್ಳಾರೆ ಇವರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply