ವಿಶ್ವಪರ್ಯಾಯ ಸಂಚಾರ ಭಾಗ-೪ ಪ್ರಾರಂಭ

ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರು ಇಂದು ಚಾಂದ್ರ ಯುಗಾದಿ ಹಬ್ಬವನ್ನು ಭಕ್ತ ಜನರ ಕೋರಿಕೆಯಂತೆ ಅಮೇರಿಕಾದ ನ್ಯೂಜೆರ್ಸಿಯ ತಮ್ಮ ಮಠದಲ್ಲಿ ಶ್ರೀಕೃಷ್ಣಪೂಜೆಯೊಂದಿಗೆ ಆಚರಿಸಿ ನೆರೆದಭಕ್ತವೃಂದವನ್ನುಅನುಗ್ರಹಿಸಿದರು .

ಪೂಜ್ಯಶ್ರೀಪಾದರುಹೊಸವರ್ಷದಂದು ಫ್ಲೋರಿಡಾದ ನಗರಗಳಿಗೆ ಸಂಚರಿಸಿ ಆಸ್ಟಿನ್ ನಗರದಲ್ಲಿ ತಮ್ಮ ಮಠದ ಹತ್ತನೆಯ ಶಾಖೆಯಲ್ಲಿ ಶ್ರೀಕೃಷ್ಣ ಪ್ರತಿಷ್ಠೆಯನ್ನು ಮಾಡಲಿದ್ದಾರೆ .

ನಂತರ ಭಕ್ತಜನರ ಅಪೇಕ್ಷೆಯಂತೆ ಚಿಕಾಗೊ ನಗರದಲ್ಲಿ ತಮ್ಮ ಮಠದ ಹನ್ನೊಂದನೆಯ ಶಾಖಾಮಠವನ್ನು ಉದ್ಘಾಟಿಸಲಿದ್ದಾರೆ .

ಮುಂದೆ ಕೆನಡ ದೇಶಕ್ಕೆ ದಿಗ್ವಿಜಯ ಮಾಡಿ ಭಕ್ತಜನರನ್ನು ಅನುಗ್ರಹಿಸಲಿದ್ದಾರೆ .

ಚಾಂದ್ರಯುಗಾದಿಯ ಶುಭದಿನದಿಂದ ಪೂಜ್ಯಶ್ರೀಪಾದರ ವಿಶ್ವಪರ್ಯಾಯಸಂಚಾರದ ಭಾಗ-೪ ಪ್ರಾರಂಭಗೊಂಡಂತಾಗಿದೆ .

 
 
 
 
 
 
 
 
 
 
 

Leave a Reply