ಉಡುಪಿ ಅಂಚೆ ವಿಭಾಗದಿಂದ ಉಡುಪಿಯಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವ

ಸುಕನ್ಯಾ ಸಮೃದ್ಧಿ ಮಹೋತ್ಸವ ಆಚರಿಸಲು ಆಯ್ಕೆಗೊಂಡ ರಾಷ್ಟ್ರದ ಎಪ್ಪತ್ತೈದು ನಗರಗಳಲ್ಲಿ ಉಡುಪಿ ಅಂಚೆ ವಿಭಾಗದ ಉಡುಪಿ ನಗರ ಕೂಡಾ ಒಂದಾಗಿದೆ. ಆ ಪ್ರಯುಕ್ತ 15.09.2022 ರಂದು ಸಂಜೆ 4 ಗಂಟೆಗೆ ಉಡುಪಿ ಅಂಚೆ ವಿಭಾಗದ ವತಿಯಿಂದ ಉಡುಪಿಯ ಮಿಷನ್ ಆಸ್ಪತ್ರೆಯ ಮಾರ್ಗದಲ್ಲಿರುವ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವವನ್ನು ಆಯೋಜಿಸಲಾಗಿದೆ‌. ಈ ಸಮಾರಂಭದಲ್ಲಿ ಉಡುಪಿ ಶಾಸಕರಾದ ಮಾನ್ಯ ರಘುಪತಿ ಭಟ್, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ , ಬಡಗಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ನಿರ್ದೇಶಕರಾದ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಲಿದ್ದಾರೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಪ್ರಾಯೋಜಿಸಲಿರುವ ಗಣ್ಯರನ್ನು ಗುರುತಿಸಿ ಪ್ರಾಯೋಜಕತ್ವ ಪಡೆದ ಫಲಾನುಭವಿಗಳಿಗೆ ಮಾನ್ಯ ಶಾಸಕರು ಖಾತಾ ಪುಸ್ತಕವನ್ನು ಹಸ್ತಾಂತರಿಸಲಿದ್ದಾರೆ . ಅಲ್ಲದೆ ಪ್ರಾಯೋಜಕರ ನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಆ ದಿನ ಬೆಳಿಗ್ಗೆ 10:00 ರಿಂದ ಸಂಜೆ ಗಂಟೆ 5 ರವರೆಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಜನ ಸುರಕ್ಷಾ ಯೋಜನೆಗಳು , ಉಳಿತಾಯ ಯೋಜನೆಗಳು , ಜೀವವಿಮೆ, ಗ್ರಾಮೀಣ ಜೀವ ವಿಮೆ , ಐಪಿಪಿಬಿ, ಸಿಎಸ್ ಸಿ ಮುಂತಾದ ಯೋಜನೆಗಳ ಮಾಹಿತಿ ಶಿಬಿರ ಹಾಗು ಆಧಾರ್ ಕಾರ್ಡ್ ನೋಂದಣಿ‌, ತಿದ್ದುಪಡಿ ಶಿಬಿರವನ್ನು ಸಾರ್ವಜನಿಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಆಯೋಜಿಸಲಾಗುವುದು. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದೆಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply