ಮತದಾನ ಜಾಗೃತಿಯ ಸಾಕ್ಷ್ಯಚಿತ್ರದಲ್ಲಿ ಪಾಲ್ಗೊಂಡ ಅಂಬಾಗಿಲಿನ ಶತಾಯುಷಿ ಅಜ್ಜಿ…!!

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಅಂಚೆ ಮತದಾನದ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇಂದಿನಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಂಚೆ ಮತದಾನವು ಪ್ರಾರಂಭಗೊಂಡಿದ್ದು ದಿನಾಂಕ 6.5. 23ರ ವರೆಗೆ ನಡೆಯಲಿದೆ. ಮತದಾನ ಅಧಿಕಾರಿಗಳ ತಂಡವು ಮತದಾರರ ಮನೆಗಳಿಗೆ ತೆರಳಿ ಹಿರಿಯ ನಾಗರೀಕ ಮತದಾರಿಗೆ ಅಂಚೆ ಮತ ಪತ್ರವನ್ನು ನೀಡಿ ಮತದಾನ ನಡೆಸುವ ಪ್ರಕ್ರಿಯೆಯ ಕುರಿತು ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯು ಸಾಕ್ಷ್ಯಚಿತ್ರವನ್ನು ಸಿದ್ದಪಡಿಸಿದೆ.

ಅಂಬಾಗಿಲು ನಿವಾಸಿ ಶತಾಯುಷಿ ಶ್ರೀಮತಿ ಕಲ್ಯಾಣಿ ಪ್ರಭು ತುಂಬುಸ್ಪೂರ್ತಿಯಿಂದ ಈ ಸಾಕ್ಷ್ಯ ಚಿತ್ರದಲ್ಲಿ ಪಾಲ್ಗೊಂಡಿದ್ದಾರೆ.

ಜಿಲ್ಲಾಧಿಕಾರಿ ಕೂರ್ಮರಾವ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ ಹೆಚ್ ಇವರ ಮಾರ್ಗದರ್ಶನದಲ್ಲಿ ಸಿದ್ದಗೊಂಡಿರುವ ಈ ಸಾಕ್ಷ್ಯ ಚಿತ್ರದ ನಿರ್ದೇಶನವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಮಾಡಿದ್ದಾರೆ.

ಡಯಟ್ ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಪರೀಕ್ಷಾರ್ಥಿ ತಹಸಿಲ್ದಾರ್ ನೀಲಾಬಾಯಿ ಲಮಾಣಿ ಮತ್ತು ಮಹೇಶ್ ಗಸ್ತೆ, ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಧೀರ್ ಪ್ರಭು, ಪೋಲಿಸ್ ಸಹಾಯಕ ಉಪನಿರೀಕ್ಷಕರಾದ ಶ್ರೀ ನಾರಾಯಣ ಇವರು ಸಾಕ್ಷ್ಯ ಚಿತ್ರದಲ್ಲಿ ಭಾಗವಹಿಸಿರುತ್ತಾರೆ. ಚಿತ್ರೀಕರಣವನ್ನು ಎಚ್. ಕೆ. ಸ್ಟುಡಿಯೋದ ಶ್ರೀ ಹರೀಶ್ ಇವರು ನಿರ್ವಹಿಸಿರುತ್ತಾರೆ. ಉಡುಪಿ ಜಿಲ್ಲಾ ಪಂಚಾಯತ್ ನ ಯುಟ್ಯೂಬ್ ಚಾನೆಲ್ ನಲ್ಲಿ ಈ ಸಾಕ್ಷ ಚಿತ್ರವು ವೀಕ್ಷಣೆಗೆ ಲಭ್ಯವಿದೆ
https://youtu.be/wcY2eR8xQvU

 
 
 
 
 
 
 
 
 
 
 

Leave a Reply