16ನೇ ಜಿಲ್ಲಾ ಶೈಕ್ಷಣಿಕ ಸಹಮಿಲನ – 2023

 ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಲಗ್ನತ್ವದ ಸಂಸ್ಥೆಗಳ ಆಡಳಿತ ಮಂಡಳಿ ಬೋಧಕ – ಬೋಧಕೇತರ ವರ್ಗದವರಿಗಾಗಿ ಆಯೋಜಿಸಿದ 16ನೇ ವರ್ಷದ ಜಿಲ್ಲಾಮಟ್ಟದ ಶೈಕ್ಷಣಿಕ ಸಹಮಿಲನ – 2023 ಕಾರ್ಯಕ್ರಮ ಜುಲೈ 15 ರಂದು ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಎಂದು ಅಮೃತ ಭಾರತಿ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಗುರುದಾಸ ಶೆಣೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ಬೆಳಗ್ಗೆ 9.45 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಶ್ರೀ ಪಾಂಡುರಂಗ ಪೈ ಸಿದ್ದಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷತೆಯಲ್ಲಿ , ಶ್ರೀ ಚಂದ್ರಶೇಖರ್ ಶೆಟ್ಟಿ ಕೆರಾಡಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಜಿಲ್ಲಾ ಶೈಕ್ಷಣಿಕ ಸಹಮಿಲನವನ್ನು ಉದ್ಘಾಟಿಸಲಿದ್ದಾರೆ.

       ಶ್ರೀ. ಕಜಂಪಾಡಿ ಸುಬ್ರಹ್ಮಣ್ಯ ಭಟ್ ನಿವೃತ್ತ ಅಧ್ಯಾಪಕರು ‘ ಭಾರತೀಯ ಜ್ಞಾನ ಪರಂಪರೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮಾಡಲಿದ್ದಾರೆ .ಕಾರ್ಯಕ್ರಮದಲ್ಲಿ ಮಹೇಶ್ ಹೈಕಾಡಿ ಸಂಪಾದಕತ್ವದ ‘ ಕಾವ್ಯೋತ್ಸವ ‘ ಕವನ ಸಂಕಲನ ಅನಾವರಣಗೊಳ್ಳಲಿದೆ. ಶೈಕ್ಷಣಿಕ ಸಮ್ಮಿಲನದಲ್ಲಿ ಶಿಕ್ಷಕ ವರ್ಗದವರಿಗಾಗಿ ‘ ಸಮರ್ಥ ಶಿಕ್ಷಕ – ಸಮರ್ಥ ಶಾಲೆ ‘ ವಿಷಯದಡಿ ಶ್ರೀ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ , ಬೋಧಕೇತರ ವರ್ಗದವರಿಗೆ ‘ ನನ್ನ ಕಾಯಕ- ಶ್ರೇಷ್ಠ ಕಾಯಕ ‘ ವಿಷಯವನ್ನು ಶ್ರೀ ಪ್ರಶಾಂತ್ ಅರೆ ಶಿರೂರು , ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರ ಅವಧಿಯನ್ನು ಶ್ರೀ . ಟಿ ಕೃಷ್ಣರಾಯ ಶಾನುಭಾಗ್ ಅವರು ‘ ವಿದ್ಯಾಭಾರತಿ ಶಾಲೆಗಳ ಆಡಳಿತ ಮಂಡಳಿಯ ಸಾಮರಸ್ಯ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ‌. 2022 – 23 ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ. ವಿದ್ಯಾಭಾರತಿ ಶೈಕ್ಷಣಿಕ ಸಂಯೋಜಿತ ಪ್ರತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾಭಾರತಿ ಕರ್ನಾಟಕ ಪ್ರಾಂತ ,ಕ್ಷೇತ್ರ ,ರಾಷ್ಟ್ರಮಟ್ಟದ ಕ್ರೀಡಾಕೂಟ , ವಿಜ್ಞಾನ ಮೇಳ ಗಣಿತ ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆಯಲ್ಲಿ ವಿಜೇತರಾದ , ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಶ್ರೀ. ಬಿ.ಕೆ ರಾಮಕೃಷ್ಣ , ಕೋಶಾಧಿಕಾರಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇವರು ಸಮಾರೋಪ ಭಾಷಣ ಮಾಡಲಿರುವರು ಎಂದು ಕಾರ್ಯದರ್ಶಿಯವರ ಪ್ರಕಟಣೆ ತಿಳಿಸಿದೆ

 
 
 
 
 
 
 
 
 
 
 

Leave a Reply