ಸಾಣೂರು : ಕುಸಿಯುವ ಭೀತಿಯಲ್ಲಿ ಪಶು ಚಿಕಿತ್ಸಾಲಯ ಕಟ್ಟಡ

ಕಾರ್ಕಳ ತಾಲೂಕು ಸಾಣೂರು ಗ್ರಾಮದ ಬೈಪಾಸ್ ಜಂಕ್ಷನ್ನಿಂದ ಮುರತಂಗಡಿ ವರೆಗೆ ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಕಾಮಗಾರಿಗಳು ಭರ ದಿಂದ ಸಾಗುತ್ತಿದ್ದು, ರಸ್ತೆ ಕಾಮಗಾರಿಗಾಗಿ ಗುಡ್ಡವನ್ನು ಅಗೆದಿರುವುದರಿಂದ, ಸಾಣೂರು ಪಶು ಚಿಕಿತ್ಸಾಲಯ ಕಟ್ಟಡದ ತಳಪಾಯದ ವರೆಗೆ ಮಣ್ಣು ಸುಮಾರು 15 ಅಡಿಯವರೆಗೆ ಅಗೆದು ಹೆದ್ದಾರಿ ನಿರ್ಮಾಣ ಮಾಡಲಾಗಿದೆ.

ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಭಾರಿ ಮಳೆ ಸುರಿದರೆ ಮಣ್ಣು ಕೊಚ್ಚಿ ಹೋಗಿ ಇಡೀ ಕಟ್ಟಡವೇ ಧರಶಾಯಿಯಾಗುವ ಅಪಾಯವಿದೆ.

ಪಕ್ಕದಲ್ಲಿ ಹೈ ಟೆನ್ಶನ್ ತಂತಿಯ ಟವರ್ ಕೂಡ ಇದ್ದು, ಗುಡ್ಡ ಕುಸಿದರೆ ಹೈ ಟೆನ್ಶನ್ ವೈಯರ್ ಧರಶಾಯಿಯಾಗಿ ಸುತ್ತ ಮುತ್ತಲಿನ ಪದ್ಮನಾಭನಗರ ನಿವಾಸಿಗಳ ಮನೆ ಮತ್ತು ಓಡಾಡುವವರಿಗೆ ಅಪಾಯ ತಂದೊಡ್ಡಬಹುದು.

ಸಾಣೂರು ಯುವಕ ಮಂಡಲದ ಕಲಾಮಂಟಪದ ಎದುರಿನ ಮೈದಾನದ ಅಂಚು ಕೂಡ ಮಣ್ಣು ಜರಿದು ರಸ್ತೆಗೆ ಬೀಳುತ್ತಿದ್ದು, ರಸ್ತೆಯಲ್ಲಿ ಓಡಾಡುವವರ ಮೇಲೆ ಅಥವಾ ವಾಹನ ಚಾಲಕರ ಮೇಲೆ ಮಣ್ಣು ಕಲ್ಲು ಕುಸಿದು ಭಾರಿ ಅಪಾಯವನ್ನು ತಂದೊಡಬಹುದು.ಮುಂಜಾಗ್ರತಾ ಕ್ರಮವಾಗಿ ಗುಡ್ಡವನ್ನು ಕಡಿದಿರುವ ಜಾಗಕ್ಕೆ ಶಾಶ್ವತವಾದ ತಡೆಗೋಡೆಯನ್ನು ನಿರ್ಮಾಣ ಮಾಡಿದರೆ ಮಾತ್ರ, ಮುಂಬರುವ ಎಲ್ಲಾ ಅಪಾಯಗಳನ್ನು ತಡೆಗಟ್ಟಬಹುದು.

ಈಗಾಗಲೇ ಸಾಣೂರು ಯುವಕ ಮಂಡಲದ ಅಧ್ಯಕ್ಷರು, ಸಾಣೂರು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗುತ್ತಿಗೆದಾರ ಸಂಸ್ಥೆ ದಿಲೀಪ್ ಬಿಲ್ಡ್ ಕಾನ್ ಕನ್ಸ್ಟ್ರಕ್ಷನ್ ಮ್ಯಾನೇಜರ್ ಮತ್ತು ಹೆದ್ದಾರಿ ಇಂಜಿನಿಯರ್ ರವರ ಗಮನಕ್ಕೆ ತಂದರು ಕೂಡ ಯಾವುದೇ ಸುರಕ್ಷತಾ ಕ್ರಮಗಳನ್ನು ಈವರೆಗೆ ಕೈಗೊಂಡಿಲ್ಲ.

ಒಂದು ವಾರದ ಒಳಗೆ ತಡಗೋಡೆ ಕಾಮಗಾರಿ ಪ್ರಾರಂಭಿಸಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸರದ ಜನತೆ ಬೀದಿಗಳಿದು ಪ್ರತಿಭಟಿಸಬೇಕಾಗಿತೆಂದು ಹೆದ್ದಾರಿ ಹೋರಾಟ ಸಮಿತಿಯ ಸದಸ್ಯರಾದ ಸಾಣೂರು ನರಸಿಂಹ ಕಾಮತ್ ರವರು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply