ಪೋಷಣ್ ಅಭಿಯಾನ ಯೋಜನೆಯಡಿ ವಿಶಿಷ್ಟ ರೀತಿಯ ಕಾರ್ಯಕ್ರಮ ಆಯೋಜನೆ

ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸಬೇಂಗ್ರೆ ಅoಗನವಾಡಿಯಲ್ಲಿ ಕೋಡಿ ಗ್ರಾಮಪಂಚಾಯತ್ ಹಾಗೂ ಹೊಸಬೇಂಗ್ರೆ ಅoಗನವಾಡಿ ಹಾಗೂ ಸ್ತ್ರೀ ಶಕ್ತಿ ಸಂಘಟನೆಗಳ ನೇತ್ರತ್ವದಲ್ಲಿ ಕೇಂದ್ರ ಸರಕಾರ ಮಹತ್ವಕಾಂಕ್ಷೆಯ ಯೋಜನೆಯಾದ ಪೋಷಣ್ ಅಭಿಯಾನದಡಿ ಪೋಷಣ್ ಮಾಸಾಚರಣೆಯ ಪ್ರಯುಕ್ತ ನಮ್ಮ ನಡೆ ಆರೋಗ್ಯಪೂರ್ಣ ಜೀವನದತ್ತ ಎಂಬ ವಿಶಿಷ್ಟ ಕಾರ್ಯಕ್ರಮ ಶುಕ್ರವಾರ ಆಯೋಜಿಸಿತ್ತು.

ಕಾರ್ಯಕ್ರಮವನ್ನು ಕೋಡಿಗ್ರಾಮಪಂಚಾಯತ್ ಅಧ್ಯಕ್ಷ ಕೆ.ಪ್ರಭಾಕರ್
ಮೆಂಡನ್ ಉದ್ಘಾಟಿಸಿದರು. ಸರಕಾರದ ಯೋಜನೆಗಳ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿ ಆರೋಗ್ಯ ವಂತ ಜೀವನಕ್ಕೆ ಪ್ರೋಟಿನ್ ಯುಕ್ತ
ಆಹಾರ ಪದ್ಧತಿ ಅನುಸರಿಸಬೇಕು,ಪ್ರಸ್ತುತ ಕಾಲಘಟ್ಟ ನಮ್ಮ ಆಹಾರಕ್ರಮಗಳು ಬದಲಾವಣೆ ಕಂಡಿವೆ ಇದರಿಂದ ನಾನಾ ರೋಗರುಜಿನಗಳಿಗೆ ಕಾರಣವಾಗಿವೆ. ಹಿಂದಿನವರು ಅನುಸರಿಸಿಕೊಂಡು ಬಂದ ಆಹಾರಪದಾರ್ಥಗಳು ನಮ್ಮ ಆಯುಷ್ಯ ವೃದ್ಧಿಸುವ ಜೊತೆಗೆ ಆರೋಗ್ಯ ಪೂರ್ಣತೆಗೆ ಸಹಕಾರಿಯಾಗಿದೆ.ಈ ದಿಸೆಯನ್ನು ಅರಿತು ಸರಕಾರ ವಿವಿಧ ರೀತಿಯ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಇದರ ಅನುಷ್ಠಾನ ಅಂಗನವಾಡಿ
ಅಥವಾ ಇನ್ನಿತರ ಸರಕಾರಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಆಯೋಜನೆಗೊಳ್ಳುತ್ತಿದೆ.ಸಮತೋಲನಯುಕ್ತ ಆಹಾರಗಳನ್ನು ಗರ್ಭಿಣಿಯರಿಗೆ ನೀಡುವ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಪಣತೋಡಲು ಕರೆಇತ್ತರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಪಿ,ಗೀತಾ
ಕಾರ್ವಿ,ಜಯಶ್ರೀ, ಆರೋಗ್ಯ ಇಲಾಖೆಯ ಮಧು .ಎ,ಪುರುಷೋತ್ತಮ್,ಅಂಗನವಾಡಿ ಬಾಲವಿಕಾಸ ಸಮಿತಿಯ ಸುಲೋಚನಾ,ರೇವತಿ,ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಪ್ರಸ್ತಾವನೆ ಗೈದರು.
ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಯಮುನಾ ನಿರ್ವಹಿಸಿದರು.
ವಿಶೇಷತೆ ಪೋಷಣ್ ಅಭಿಯಾನದಡಿ ಆರು ತಿಂಗಳು ತುಂಬಿದ ಮಗುವಿಗೆ ಅನ್ನ ಪ್ರಾಶಣ
ನೀಡಲಾಯಿತು. ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿಯರಿಗಾಗಿ ವಿವಿಧ ಬಗೆಯ ಆಟೋಟ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಹಗ್ಗಜಗ್ಗಾಟ,ಸಂಗೀತ ಕುರ್ಚಿ, ಪೋಷಕರಿಗೆ ಫೌಷ್ಠಿಕ ಆಹಾರ ತಯಾರಿಕೆ ಸ್ಪರ್ಧೆ,ಪೌಷ್ಠಿಕ ಆಹಾರ ಸ್ಮರಣಶಕ್ತಿ
ಸ್ಪರ್ಧೆ ನಡೆಯಿತು.

 
 
 
 
 
 
 
 
 
 
 

Leave a Reply