ವಿಶ್ವಾರ್ಪಣಮ್’ ಸಮಾರಂಭದಲ್ಲಿ ಶ್ರೀ ಭೀಮನಕಟ್ಟೆ ಶ್ರೀಗಳು ಭಾಗಿ

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ನಾಡಿನ ಹೆಮ್ಮೆಯ ನಿವೃತ್ತ ಯೋಧ ಪೆರಂಪಳ್ಳಿ ನೆಕ್ಕಾರು ಶ್ರೀನಿವಾಸ ರಾವ್,ರಥ ಮತ್ತು ಚಿನ್ನದ ಕುಸುರಿ ಶಿಲ್ಪಿಗಳಾದ ಕುಂಜಾರುಗಿರಿ ರಾಘವೇಂದ್ರ ಆಚಾರ್ಯರನ್ನು ಸನ್ಮಾನಿಸಿ,ಜ್ಞಾನವೇ ಮನುಷ್ಯನಿಗೆ ಪ್ರಧಾನವಾದ ಸಂಪತ್ತು.ಜ್ಞಾನವಿದ್ದಾಗ ಸಮಾಧಾನವಿರುತ್ತದೆ. 

ಸಮಾಧಾನವೇ ಸಾಧನೆಯ ಮೂಲ ಸ್ರೋತಸ್ಸು.ವೈವಿಧ್ಯ ಅನ್ನುವುದು ಮನುಷ್ಯನ ಬದುಕಿಗೆ ಅರ್ಥವನ್ನು ತಂದುಕೊಡುತ್ತದೆ. ಭಾಷೆಗಳ, ಮತಗಳ, ಸಂಸ್ಕೃತಿಗಳ, ಸಂಪ್ರದಾಯಗಳ ವೈವಿಧ್ಯವೇ ಈ ದೇಶದ ಏಕತೆಯ ಪ್ರಧಾನ ಶಕ್ತಿ ಎಂದು ಅನುಗ್ರಹಿಸಿದರು.

ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ಶ್ರೀಪಾದರು ಅರ್ಜುನನನ್ನು ನೆಪವಾಗಿಸಿಕೊಂಡು ಗೀತೆಯನ್ನು ಉಪದೇಶಿಸಿದನು.ಗೀತೆ ಒಂದು ವಿಶ್ವಮಾನ್ಯ ಕೃತಿ,ಅಲ್ಲಿ ಶ್ರೀಕೃಷ್ಣ ಹೇಳಿದಂತೆ ಕ್ಷುದ್ರವಾದ ಹೃದಯ ದೌರ್ಬಲ್ಯವನ್ನು ನಾವು ತೊರೆಯದಿದ್ದರೆ ನಮ್ಮ ಧರ್ಮ ನಮ್ಮ ಕೈ ಹಿಡಿಯುವುದಿಲ್ಲ.ಒಳ್ಳೆಯ ಹಣತೆ ಒಳ್ಳೆಯ ತೈಲ ಮತ್ತು ಚೆನ್ನಾಗಿ ಉರಿಯುವ ಬತ್ತಿ ಇದ್ದಾಗಲಷ್ಟೇ ಧರ್ಮದ ಬೆಳಕು ಪ್ರಜ್ವಲಿಸುತ್ತದೆ ಎಂದರು.

ಭಾರತ ಸರಕಾರದ ಶಿಕ್ಷಣ ಮಂತ್ರಾಲಯದ,ಭಾರತೀಯ ಭಾಷೆಗಳ ಉಚ್ಚಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರಾದ ಚಮೂ ಕೃಷ್ಣಶಾಸ್ತ್ರಿಯವರು “ಭಾರತೀಯ ಭಾಷೆಗಳು, ಭಾರತೀಯ ಜ್ಞಾನಪರಂಪರೆ ಮತ್ತು ಭಾರತದ ಭವಿಷ್ಯ” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಅಭ್ಯಾಗತರಾಗಿ ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಭಾಗವಹಿಸಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply