ಮಾ.30,31: ಶ್ರೀ ಬಬ್ಬುಸ್ವಾಮಿ ದೇವಸ್ಥಾನ ಅಂಬಲಪಾಡಿ : ನೇಮೋತ್ಸವ, ಸಾಧಕರಿಗೆ ಸನ್ಮಾನ

ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ (ಪಡುಪಾಲು) ಅಂಬಲಪಾಡಿ ಇದರ ನೇಮೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಮಾರ್ಚ್ 30 ಶನಿವಾರ ಮತ್ತು ಮಾರ್ಚ್ 31 ರವಿವಾರ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಬಳಿ ನಡೆಯಲಿದೆ ಎಂದು ನೇಮೋತ್ಸವ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.

ಮಾ.30 ಶನಿವಾರ ಬೆಳಿಗ್ಗೆ ಗಂಟೆ 7.30ಕ್ಕೆ ಮಹಾ ಚಪ್ಪರದ ಗಜಕಂಬ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾ ಚಪ್ಪರದ ಆರೋಹಣ,12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 4.00ಕ್ಕೆ ದೈವಸ್ಥಾನದಲ್ಲಿ ಮಹಾಪೂಜೆ ಮತ್ತು ಶ್ರೀ ದೈವಗಳ ದರ್ಶನ, ಗಂಟೆ 5.00ಕ್ಕೆ ದೇವಸ್ಥಾನದಿಂದ ಮುಖ ಮೂರ್ತಿ ಭಂಡಾರಗಳನ್ನು ಮೆರವಣಿಗೆಯಲ್ಲಿ ಮಹಾಚಪ್ಪರಕ್ಕೆ ತರುವುದು.

ರಾತ್ರಿ ಗಂಟೆ 9.00ಕ್ಕೆ ‘ನಿಡಂಬೂರು ಬೀಡು ಶ್ರೀ’ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಮುಖ್ಯೋಪಾಧ್ಯಾಯ ಎ. ಜಯಕರ ಶೆಟ್ಟಿ, ಪಠೇಲರ ಮನೆ ಅಂಬಲಪಾಡಿ ಮತ್ತು ತಬಲಾ ವಾದಕ ಹಾಗೂ ತರಬೇತುದಾರ ಕೆ. ಮಂಜಪ್ಪ ಸುವರ್ಣ ಅಂಬಲಪಾಡಿ ಇವರಿಗೆ ನೇಮೋತ್ಸವ ಸಮಿತಿಯ ವತಿಯಿಂದ ಸಮಿತಿಯ ಗೌರವಾಧ್ಯಕ್ಷ ಹಾಗೂ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ರವರಿಂದ ಸನ್ಮಾನ ನಡೆಯಲಿದೆ.

ರಾತ್ರಿ ಗಂಟೆ 9.00ಕ್ಕೆ ಶ್ರೀ ಬಬ್ಬುಸ್ವಾಮಿಯ ನೇಮ, ರಾತ್ರಿ ಗಂಟೆ 12.00ಕ್ಕೆ ಶ್ರೀ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.

ಮಾ.31 ರವಿವಾರ ಬೆಳಿಗ್ಗೆ ಗಂಟೆ 9.00ಕ್ಕೆ ಶ್ರೀ ಧೂಮಾವತಿ ಬಂಟ ದೈವಗಳ ನೇಮ, ಮಧ್ಯಾಹ್ನ ಗಂಟೆ 12.00 ರಿಂದ ಶ್ರೀ ಮಹಾ ಗುಳಿಗದ್ವಯ ದೈವಗಳ ನೇಮ, ಸಂಜೆ ಗಂಟೆ 4.00ರಿಂದ ಕೊರಗಜ್ಜ ದೈವದ ನೇಮ ನಡೆಯಲಿದೆ ಎಂದು ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply