ಉಡುಪಿಗೆ ಒಂದು ಸುಸಜ್ಜಿತ (Amphi) ಎಂಪಿ ಥಿಯೇಟರ್ ಅಗತ್ಯ ~ಪ್ರೊ. ಮುರಳೀಧರ ಉಪಾಧ್ಯ

ಉಡುಪಿಯ ಭುಜಂಗ ಪಾರ್ಕ್ ಬಳಿ ಬೆಂಗಳೂರಿನ ರಂಗ ಶಂಕರ ಮಾದರಿಯ ಸುಸಜ್ಜಿತವಾದ ರಂಗಮಂದಿರವನ್ನು ನಿರ್ಮಾಣ ಮಾಡಬೇಕೆಂದು ಕನ್ನಡದ ಹಿರಿಯ ವಿಮರ್ಶಕ, ಸಾಹಿತಿ ಪ್ರೊ. ಮುರಳೀಧರ ಉಪಾಧ್ಯಾ ಅವರು ಉಡುಪಿಯ ನಗರ ಸಭೆಗೆ ಒತ್ತಾಯಿಸಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ, ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಮಲಬಾರ್ ವಿಶ್ವರರಂಗ ಪುರಸ್ಕಾರ 2023 ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ, ಉಡುಪಿ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು , ಸುಸಜ್ಜಿತವಾದ ರಂಗಮಂದಿರ ಅಗತ್ಯವಿದೆ. ಈ ನಿಟ್ಟಿನಲ್ಲಿ ಉಡುಪಿ ನಗರ ಸಭೆಯು ಬೆಂಗಳೂರಿನ ರಂಗ ಶಂಕರದ ಮಾದರಿಯ ಸುಸಜ್ಜಿತವಾದ ರಂಗ ಮಂದಿರ (ಎಂಪಿ ಥಿಯೇಟರ್) ನಿರ್ಮಾಣ ಮಾಡಬೇಕು, ಉಡುಪಿಯ ಎಲ್ಲಾ ರಂಗ ತಂಡಗಳು, ಸಾಂಸ್ಕೃತಿಕ ತಂಡಗಳು ಕೈಗೆಟುಕುವ ಬಾಡಿಗೆಯನ್ನು ನೀಡಿ ನಾಟಕ ಪ್ರದರ್ಶನ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವಂತೆ ಆಗಬೇಕು, ಉಡುಪಿ ನಗರ ಸಭೆ ಈ ಬಗ್ಗೆ ಆದಷ್ಟು ಬೇಗ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹಕ್ಕುತ್ತಾಯಿಸಿದರು.

ಈ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಸಾಧನೆ ಮಾಡಿದ ಹಿರಿಯರಾದ ಮೂರ್ತಿ ದೇರಾಜೆ , ಬೆಂಗಳೂರಿನ ಶೋಭ ವೆಂಕಟೇಶ್, ಉಡುಪಿಯ ಎಂ. ಎಸ್. ಭಟ್ ಹಾಗೂ ಪಾಂಬೂರಿನ ಪ್ರಕಾಶ್ ನೊರೋನ್ಹ ಅವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಲಾವಣ್ಯ ಬೈಂದೂರು ಇದರ ಮುಖ್ಯಸ್ಥರಾದ ಗಣೇಶ್ ಕಾರಂತ್, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣಿೈ, ಅಧ್ಯಕ್ಷರಾದ ಪ್ರೊ. ಶಂಕರ್ ,ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ವ್ಯವಸ್ಥಾಪಕ ಹಫೀಸ್ ರೆಹಮಾನ್ ಉಪಸ್ಥಿತರಿದ್ದರು.

ಮಲಬಾರ್ ವಿಶ್ವರಂಗ ಪುರಸ್ಕಾರದ ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು . ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆ ಮಾತನಾಡಿದರು . ಉಪಾಧ್ಯಕ್ಷೆ ಸಂಧ್ಯಾ ಶೆಣೆೈ ವಂದಿಸಿ, ಕೃಷ್ಣಮೂರ್ತಿ ಮಂಜಿತಾಯ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾರಂಭದಲ್ಲಿ ಯುವ ಕಲಾವಿದೆ ಪವಿತ್ರ ನಾಯಕ್ ಅವರಿಂದ ಏಕವ್ಯಕ್ತಿ ರಂಗ ಪ್ರಯೋಗ ನಡೆಯಿತು.

 
 
 
 
 
 
 
 
 
 
 

Leave a Reply