ಮಾಹೆ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಬಲೀಕರಣ ಮತ್ತು ಒಳಗೊಳ್ಳುವಿಕೆಯ ಪ್ರೇರಣದಾಯಿ ಆಶಯದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಇಲ್ಲಿನ ಪ್ರತಿಷ್ಠಿತ ಡಾ. ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವು ಲಿಂಗ ಸಮಾನತೆಯನ್ನು ಮುನ್ನಡೆಸಲು ಮತ್ತು ವೈವಿಧ್ಯತೆಯ ಸಂಸ್ಕೃತಿಯನ್ನು ಬೆಳೆಸಲು ಬದ್ಧವಾಗಿರುವ #Inspireinclusion ಥೀಮ್ ಗೆ ಸಾಕ್ಷಿಯಾಯಿತು ಮತ್ತು ಭಾಗವಹಿಸಿದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಹೆ ವಿಶ್ವವಿದ್ಯಾಲಯದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್, ಶಿಕ್ಷಣ ತಜ್ಣರಾದ ಶ್ರೀಮತಿ ಕುಸುಮಾ ವೆಂಕಟೇಶ್, ಸಮಾಜಸೇವಕರಾದ ಶ್ರೀಮತಿ ಇಂದಿರಾ ಎಸ್. ಬಲ್ಲಾಳ್ ಮತ್ತು ಮಾಹೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಹೆಚ್. ಎಸ್ ಬಲ್ಲಾಳ್ ಅವರ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಜರಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಸ್ರೋ ಬೆಂಗಳೂರು ಕೇಂದ್ರದ ವಿಜ್ಞಾನಿ ಡಾ.ಶ್ಯಾಮ ನರೇಂದ್ರನಾಥ್ ಕೆ.ಸಿ ಅವರು ಮಾತನಾಡಿ, ಅಂತರರಾಷ್ಟ್ರೀಯ ಮಹಿಳಾ ದಿನದಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಖುಷಿಕೊಟ್ಟಿದೆ.

 ಅಪಾರ ಕೊಡುಗೆ ನೀಡಿದ ಮಹಿಳೆಯರ ಗಮನಾರ್ಹ ಸಾಧನೆಗಳನ್ನು ಗುರುತಿಸಿ, ಶ್ಲಾಘಿಸಬೇಕು. ಸಮಾಜದಲ್ಲಿನ ಅನೇಕ ಅಡೆತಡೆಗಳನ್ನು ಮೆಟ್ಟಿನಿಂತು ಮಹಿಳೆಯರು ಸಾಕಷ್ಟು ಸಾಧನೆ ಮಾಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿದ್ದಾರೆ. ಆದಾಗ್ಯೂ, ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಇನ್ನೂ ಪ್ರಗತಿಯನ್ನು ಸಾಧಿಸಬೇಕಾಗಿದೆ. ಈ ಕಾರ್ಯಕ್ರಮದ ಮೂಲಕ ಲಿಂಗ ಸಮಾನತೆಯ ನಿಟ್ಟಿನಲ್ಲಿ ಇನ್ನಷ್ಟು ಪ್ರಗತಿ ಕಾಣಲಿ. ಮಹಿಳೆಯು ಸಾಧನೆಯ ಮೂಲಕ ತನ್ನ ಗುರುತು ಸಮಾಜದಲ್ಲಿ ಉಳಿಸಿಕೊಳ್ಳಬೇಕು ಎಂದು ಆಶಿಸಿದರು.

ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸುವ ಕಾರ್ಯ ಇದು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದಲ್ಲಿ ಮಾಹೆ ವಿಶ್ವವಿದ್ಯಾಲಯವು ಹೊಂದಿರುವ ಬದ್ಧತೆಯನ್ನು ಇದು ತೋರಿಸುತ್ತದೆ. ಲಿಂಗ ಅಸಮಾನತೆಗೆ ಅವಕಾಶ ನೀಡದೆ. ಪ್ರತಿಯೊಬ್ಬರು ಸಾಧನೆಯ ಪಥದಲ್ಲಿ ಸಾಗಬೇಕು ಎಂದರು.

ಮಾಹೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಲ್ ಮಾತನಾಡಿ, “ಲಿಂಗ ಸಮಾನತೆಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಈ ಕಾರ್ಯಕ್ರಮ ನೆನಪಿಸುತ್ತದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಮರ್ಥವಾಗಿ ಸಾಧನೆ ಮಾಡುತ್ತಿದ್ದಾರೆ ಅವರಿಗೆ ಇಡೀ ಸಮಾಜದ ಪ್ರೇರಣೆ ಪ್ರೋತ್ಸಾಹ ಅಗತ್ಯ. ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುವ ಮೂಲಕ ಸುಂದರ ಜಗತ್ತು ಸೃಷ್ಟಿಸಬಹುದು ಎಂದರು. 

ಸಂಸ್ಥೆಯ ಸ್ಥಾಪಕರಾದ ಮೇರು ವ್ಯಕ್ತಿತ್ವದ ದಿವಂಗತ ಶ್ರೀಮತಿ ಶಾರದಾ ಟಿ. ಪೈ ಮತ್ತು ದಿವಂಗತ ಡಾ. ಟಿಎಂಎ ಪೈ ಅವರಿಗೆ ಮಣಿಪಾಲದ ಎಂಸಿಒಎನ್‌ನಿಂದ ವಿದ್ಯಾರ್ಥಿಗಳಿಂದ ಬೆಳಗ್ಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭವಾಗಿಯಿತು. ನಂತರ ವಿವಿಧ ಚರ್ಚಾ ಗೋಷ್ಠಿಗಳು, ಸಮ್ಮಾನ, ಅಭಿನಂದನೆಗಳು ಮತ್ತು ಆಕರ್ಷಕ ಪ್ರದರ್ಶನಗಳು ನಡೆದವು.

ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳು ಮತ್ತು ಕೊಡುಗೆಗಳು, ಕ್ರೀಡೆಯಲ್ಲಿ ಲಿಂಗ ವೈವಿಧ್ಯತೆಯನ್ನು ಉತ್ತೇಜಿಸಲು ಮಾಹೆ ವಿಶ್ವವಿದ್ಯಾಲಯದ ಬದ್ಧತೆಯ ಸಂಕೇತವಾಗಿ ‘ಹರ್ ವರ್ಲ್ಡ್ ಹರ್ ರೂಲ್ಸ್ ವುಮೆನ್ಸ್ ಬಾಸ್ಕೆಟ್ ಬಾಲ್ ಕ್ಲಿನಿಕ್’ನ ಉದ್ಘಾಟನೆ ಸೇರಿದಂತೆ ಮಹತ್ವದ ಮೈಲಿಗಲ್ಲುಗಳನ್ನು ಈ ಕಾರ್ಯಕ್ರಮದ ಮೂಲಕ ಸಾಧಿಸಲಾಯಿತು.

ಎಂಐಟಿ ವಿದ್ಯಾರ್ಥಿಗಳಿಂದ ಮನಮೋಹಕ ನೃತ್ಯ ಪ್ರದರ್ಶನಗಳು ಮತ್ತು ಡಾ. ಎಲ್ಸಾ ಮತ್ತು ಅವರ ತಂಡದಿಂದ ಈಶಾನ್ಯ ಭಾರತೀಯ ಸಂಸ್ಕೃತಿಯ ರೋಮಾಂಚಕ ಕಲಾ ಪ್ರದರ್ಶನದ ಮೂಲಕ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು. 

 ಮಾಹೆ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ವಸಂತಿ ಆರ್ ಪೈ ಅವರ ಅಧ್ಯಕ್ಷೀಯ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು, ಲಿಂಗ ಸಮಾನತೆ ಮತ್ತು ಒಳಗೊಳ್ಳುವಿಕೆಗೆ ಸಂಸ್ಥೆಯ ಅಚಲವಾದ ಸಮರ್ಪಣೆಯನ್ನು ಪುನರುಚ್ಚರಿಸಿತು.

ಅಲುಮ್ನಿ ರಿಲೇಶನ್ಸ್ ನಿರ್ದೇಶಕ ಡಾ. ರೋಹಿತ್ ಸಿಂಗ್ ಧನ್ಯವಾದ ತಿಳಿಸಿದರು. ಮಣಿಪಾಲದ ಕೆಎಂಸಿಯ ಡಾ.ರೀನಾ ಶೆರಿನ್ ಪರ್ವೀನ್ ಅವರು ಕಾರ್ಯಕ್ರಮ ನಿರೂಪಿಸಿದರು.

ಒಟ್ಟಾರೆಯಾಗಿ ಮಾಹೆ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬದ್ಧತೆಗೆ ಸಾಕ್ಷಿಯಾಗಿದೆ ಮತ್ತು ಸಮಾಜದೊಂದಿಗೆ ಈ ಕಾರ್ಯವನ್ನು ಮುನ್ನಡೆಸಲು ಹೆಚ್ಚಿನ ಸ್ಪೂರ್ತಿಯು ಇತರ ಸಂಸ್ಥೆಗಳಿಗೆ ನೀಡಿದೆ. ಮಹಿಳೆಯರು ಮೌಲ್ಯಯುತವಾದ, ಬೆಂಬಲಿತವಾದ ಮತ್ತು ಅವರ ಸ್ವ ಸಾಮರ್ಥ್ಯದ ಮೂಲಕ ಸಶಕ್ತರಾಗಿ ಸಾಧನೆಯ ಶಿಖರ ಎರುವ

ವಾತಾವರಣವನ್ನು ಪೋಷಿಸುವ ಮೂಲಕ, ಮಾಹೆ ಎಲ್ಲರಿಗೂ ಉಜ್ವಲ ಭವಿಷ್ಯ ಆಶಿಸಲಿದೆ.

 
 
 
 
 
 
 
 
 
 
 

Leave a Reply