ಶ್ರೀಕೃಷ್ಣ ಮಠದಲ್ಲಿ 08.30ರಿಂದ ದರ್ಶನಕ್ಕೆ ಅವಕಾಶ

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಭಕ್ತರ ಅನುಕೂಲಕ್ಕಾಗಿ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಶ್ರೀಕೃಷ್ಣನ ದರ್ಶನವು ಭಕ್ತರಿಗೆ ಹೆಚ್ಚು ಒದಗಬೇಕೆನ್ನುವ ಕಾಳಜಿಯಿಂದ ದರ್ಶನ ಸಮಯದಲ್ಲಿ ಸ್ವಲ್ಪ ಬದಲಾವಣೆ ತರಲಾಗಿದೆ.

ಭಕ್ತಾದಿಗಳು ಬೆಳಿಗ್ಗೆ 08.30ರಿಂದ 11.00 ಹಾಗೂ ಮಧ್ಯಾಹ್ನ 01.30ರಿಂದ ಸಂಜೆ 06.00ರವರೆಗೆ ಶ್ರೀದೇವರ ದರ್ಶನವನ್ನು ಮಾಡಬಹುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply