ರಕ್ತದಾನಿಯ ಪ್ರತೀ ಹನಿ ರಕ್ತವೂ ರೋಗಿಯ ಜೀವ ಉಳಿಸುವಲ್ಲಿ ಸಹಾಯಕಾರಿ : ಉಡುಪಿ ಸಹಕಾರ ಭಾರತೀ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ

ಮಣಿಪಾಲ: ಕೆಎಂಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದಲ್ಲಿ ರಕ್ತಭಿಮಾನಿ ಬಳಗ ಮಲ್ಪೆ, ಭಜರಂಗದಳ ಬಲರಾಮ ಘಟಕ ಮಲ್ಪೆ, ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಉಡುಪಿ ಸಹಕಾರ ಭಾರತೀ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ ಮಾತನಾಡಿ,ಇಂದು ದೇಶವು ಅತ್ಯಂತ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸವಾಲಿನ ವಾತಾವರಣದಲ್ಲಿ ಸಾಮಾಜಿಕ ಸಂಸ್ಥೆಗಳು ನಿಸ್ವಾರ್ಥ ರೀತಿಯಲ್ಲಿ ಸೇವೆ ಸಲ್ಲಿಸಿ ಸರಕಾರದ ಮನೋಬಲವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಈಗ ಆಸ್ಪತ್ರೆಗಳಲ್ಲಿ ಅತ್ಯಂತ ಹೆಚ್ಚು ರಕ್ತದ ಅವಶ್ಯಕತೆ ಕಾಣುತಿದ್ದು ರಕ್ತದಾನಿ ಸಂಸ್ಥೆಗಳು ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರಗಳ ಸಂಗ್ರಹವನ್ನು ಕಾಯ್ದಿರಿಸುತ್ತಿದೆ. ರಕ್ತದಾನಿಯ ಪ್ರತೀ ಹನಿ ರಕ್ತವೂ ಕೂಡ ಓರ್ವ ರೋಗಿಯ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಭಿಮತ ವ್ಯಕ್ತ ಪಡಿಸಿದರು.

ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಉದ್ಘಾಟಿಸಿ ನಿರಂತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವ ಸಾಮಾಜಿಕ ಸಂಸ್ಥೆಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಯ ಹಸ್ತ ಅಧ್ಯಕ್ಷ ರಾಜೇಶ್ ಶೆಟ್ಟಿ ಮುನಿಯಾಲು, ಪದಾಧಿಕಾರಿ ಮಂಜುನಾಥ್ ಚೇರ್ಕಾಡಿ, ಬಜರಂಗದಳ ಕಾರ್ಕಳ ಘಟಕದ ಕಾರ್ಯದರ್ಶಿ ಸುನಿಲ್ ನಿಟ್ಟೆ, ರಕ್ತ ನಿಧಿ ವಿಭಾಗ ಮುಖ್ಯಸ್ಥೆ ಡಾ. ಶಮಿ ಶಾಸ್ತ್ರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಉಪಾಧ್ಯಕ್ಷ ವಿನಯಕುಮಾರ್ ಕಲ್ಮಾಡಿ ಉಪಸ್ಥಿತರಿದ್ದರು. ಅಭಯಹಸ್ತ ಸ್ಥಾಪಕ ಅಧ್ಯಕ್ಷ ರಕ್ತದ ಆಪತ್ ಭಾಂದವ ಸತೀಶ್ ಸಾಲಿಯಾನ್ ಕಾರ್ಯಕ್ರಮ ಸಂಘಟಿಸಿದರು. ಅಕ್ಷಯ ಪಾಡಿಗಾರ ಸ್ವಾಗತಿಸಿ, ಗಿರೀಶ್ ಕರಂಬಳ್ಳಿ ವಂದಿಸಿ, ಪಚ್ಚಿ ಮಣಿಪಾಲ ನಿರೂಪಿಸಿದರು.

 
 
 
 
 
 
 
 
 
 
 

Leave a Reply