ಹಡಿಲು ಭೂಮಿ ಕೃಷಿ ಕಾಯಕದಲ್ಲಿ ತೊಡಗಿರುವ ಯುವ ವಿಚಾರ ವೇದಿಕೆ ಉಪ್ಪೂರು

ಯುವ ವಿಚಾರ ವೇದಿಕೆ ಉಪ್ಪೂರು ಇವರ ವತಿಯಿಂದ ಹಡಿಲು ಭೂಮಿ ಕೃಷಿ ಕಾರ್ಯ ಇಂದು ನೆರವೇರಿಸಲಾಯಿತು. ಪ್ರಸ್ತುತ ಕೃಷಿ ಕಾಯಕಕ್ಕೆ ಜನರು ಸಿಗದೆ, ಯುವ ಪೀಳಿಗೆ ಕೃಷಿ ಕಾಯಕಕ್ಕೆ ಹಿಂದೇಟು ಹಾಕುವ ಸಂದರ್ಭದಲ್ಲಿ ಕಳೆದ ವರ್ಷದಂತೆ ಈ ವರ್ಷ ಕೂಡ ಅಮ್ಮುಂಜೆ ಪರಿಸರದಲ್ಲಿ ಹಡಿಲು ಬಿದ್ದ ಗದ್ದೆ ಕೃಷಿ ಮಾಡುವ ಮೂಲಕ ಸಮಾಜಕ್ಕೆ ನಮ್ಮ ಯುವ ವಿಚಾರ ವೇದಿಕೆ ಮಾದರಿ ಸಂಘ ಎಂದು ಕೃಷಿ ಕಾರ್ಯಕ್ಕೆ ಆಗಮಿಸಿದ ಅತಿಥಿಗಳ ಮಾತು.ಆಗಮಿಸಿದ ಅತಿಥಿಗಳು ಭೂಮಿ ತಾಯಿಗೆ ಹಾಲು ಎರೆಯೂದರ ಮೂಲಕ ಹಡಿಲು ಭೂಮಿ ಕೃಷಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳು ನೇಜಿಯನ್ನು ಸಂಘದ ಸದಸ್ಯರಿಗೆ ಹಸ್ತಾಂತರಿಸಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.ಈ ಕಾಯಕದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನಿ ರೋಚ್ , ಸತೀಶ್ ಪೂಜಾರಿ , ಮುಂಬೈ ಉದ್ಯಮಿ ಮೈಕಲ್, ಸ್ಥಳೀಯರಾದ ಮಾರ್ಟಿಸ್, ವಿನೋದ್ ನಾಯಕ್, ಹಿರಿಯರಾದ ಮಾಧವ ಪಾಣ, ಗದ್ದೆಯ ಮಾಲೀಕರಾದ ಮಾರ್ಗರೆಟ್, ಅಪ್ಪಿ, ಸ್ಪಂದನ ವಿಶೇಷ ಚೇತನ ಶಾಲೆಯ ಜನಾರ್ದನ, ಉಮೇಶ್, ಸ್ಥಳೀಯರಾದ ರಿಚರ್ಡ್ , ಪೀಟರ್ , ಉ. ವ್ಯ.ಸೆ.ಸ.ಸಂಘದ ವ್ಯವಸ್ಥಾಪಕರಾದ ಸಂದೀಪ್ ಶೆಟ್ಟಿ, ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ವೇದಿಕೆಯ ಸರ್ವ ಸದಸ್ಯರು, ಮಹಿಳಾ ಸದಸ್ಯರು, ಸ್ಥಳೀಯ ಮಹಿಳೆಯರು ಕೃಷಿ ಕಾಯಕದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.ಆಗಮಿಸಿದ್ದ ಅತಿಥಿ ಗಣ್ಯರಿಗೆ ರೈತರು ಕೃಷಿ ಸಮಯದಲ್ಲಿ ಉಪಯೋಗಿಸುವ ತಲೆಗೆ ಹಾಕುವ ಪಾಳೆಯನ್ನು ಸ್ಮರಣಿಕೆ ಯಾಗಿ ನೀಡಲಾಯಿತು. ಕಾರ್ಯಕ್ರಮವನ್ನು ವೇದಿಕೆಯ ಯೋಗೀಶ್ ಕೊಳಲಗಿರಿ ಅಚ್ಚುಕಟ್ಟಾಗಿ ನಿರೂಪಿಸಿ ಯಶಸ್ವಿಗೊಳಿಸಿದರು. ವೇದಿಕೆಯ ಸರ್ವ ಸದಸ್ಯರು ಹಾಗೂ ಸ್ಥಳೀಯರ ಸಹಕಾರ ಬೆಂಬಲದೊಂದಿಗೆ ಕೃಷಿ ಕಾರ್ಯ ಯಶಸ್ವಿಯಾಯಿತು.

 
 
 
 
 
 
 
 
 
 
 

Leave a Reply