ಶ್ರೀ ಕಾಣಿಯೂರು ಮಠ – ನೂತನ ಕಾಷ್ಠಶಿಲ್ಪದ ಸಿಂಹಾಸನ ಅರ್ಪಣೆ

ಉಡುಪಿಯ ಶ್ರೀ ಕಾಣಿಯೂರು ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಕಾಷ್ಠಶಿಲ್ಪದ ಕೆತ್ತನೆಗಳಿಂದ ಕೂಡಿದಂತಹ ಸಿಂಹಾಸನವನ್ನು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ದೀಪಹಚ್ಚುವ ಮೂಲಕ ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಾರು ಕೋಟಿ ರೊಪಾಯಿ ವೆಚ್ಚಗಳ ಮೂಲಕ ನಿರ್ಮಾಣ ಗೊಂಡಿರುವ ಈ ಸಿಂಹಾಸನ ಕಾಷ್ಠಶಿಲ್ಪದ ಮೆರುಗನ್ನು ಎತ್ತಿ ತೋರಿಸುತ್ತಿದೆ ಶ್ರೀ ಕಾಣಿಯೂರು ಮೂಲ ಮಠದಿಂದ ತಂದ ತೇಗದಮರ (ಸಾಗುವಾನಿ) ಹಾಗೂ ಬೀಟಿ (ರೋಸ್ ವುಡ್) ಮರದಿಂದ ದಶಾವತಾರಗಳ ಮೂರ್ತಿಗಳು ,ಮಧ್ವಾಚಾಚಾರ್ಯರು ವಾದಿರಾಜರು, ಇದರಿಂದ ಕೂಡಿರತಕ್ಕಂತಹ ನಾನಾತರಹವಾದ ಶಿಲ್ಪಕಲೆಯ ಕೆತ್ತನೆಯನ್ನು ಹೊಂದಿರತಕ್ಕಂತಹ ವಿಶಿಷ್ಟವಾದ ಕಲೆಗಳಿಂದ ಕೂಡಿರತಕ್ಕಂತಹ ಅದರಿಂದಲೇ ಒಂದು ಮೆರುಗನ್ನು ನೀಡತಕ್ಕಂತಹ ಸಿಂಹಾಸನವನ್ನು ನಿರ್ಮಾಣಮಾಡಿ ನರಸಿಂಹ ದೇವರಿಗೆ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಶ್ರೀ ಕೃಷ್ಣಾಪುರ ಶ್ರೀಪಾದರ ಮೂಲಕ ಅರ್ಪಣೆಮಾಡಿದರು.

 
 
 
 
 
 
 
 
 
 
 

Leave a Reply