ರಥಬೀದಿ ವೀರ ಬಾಲಕರ 51 ನೇ ವರ್ಷದ ಶಾರದಾ ಮಹೋತ್ಸವ

51 ನೇ ವರ್ಷದ ರಥಬೀದಿ ವೀರ ಬಾಲಕರ ಶಾರದಾ ಮಹೋತ್ಸವ ಗೋಕರ್ಣ ಮಠದಲ್ಲಿ ಸಪ್ಟೆಂಬರ್ 30 ರಿಂದ ಅಕ್ಟೋಬರ್ 5ರ ತನಕ ನಡೆಯಲಿದೆ.

ಶುಕ್ರವಾರ ಶ್ರೀ ದೇವಿಯ ವಿಗ್ರಹವನ್ನು ಉತ್ಸವದಲ್ಲಿ ನಗರದ ಟ್ಯಾಂಕ್ ಕಾಲನಿಯಿಂದ ವಿ.ಟಿ ರಸ್ತೆ,ರಥಬೀದಿ,ನಂದಾದೀಪ ರಸ್ತೆ,ಪ್ಲವರ್ ಮಾರ್ಕೆಟ್ ರಸ್ತೆ ಮೂಲಕ ಪ್ರತಿಷ್ಠಾ ಸ್ಥಳಕ್ಕೆ ತರಲಾಯಿತು.ಭಾನುವಾರ ಶ್ರೀ ಶಾರದಾ ಪ್ರತಿಷ್ಠೆ ಬೆಳಿಗ್ಗೆ 6.15ರ ಶುಭ ಮುಹೂರ್ತದಲ್ಲಿ ನಡೆಯಲಿದೆ.6 ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಭಕ್ತರು ಪ್ರತಿ ವರ್ಷದಂತೆ ತನು ಮನ ಧನಗಳ ಸಹಯೋಗದಲ್ಲಿ ಭಾಗವಹಿಸಬೇಕಾಗಿ ಸಮಿತಿ ವಿನಂತಿಸಲಾಗಿದೆ.ಪೂರ್ಣಾಲಂಕಾರ ಶ್ರೀ ಶಾರದಾ ವಿಸರ್ಜನಾ ಮಾತೆಯ ಶೋಭಾಯಾತ್ರೆ ಅಕ್ಟೋಬರ್ 5ರಂದು ನಡೆಯಲಿದೆ.

 
 
 
 
 
 
 
 
 
 
 

Leave a Reply