ಹಂದಟ್ಟು ಚೆಚ್ಚಕೆರೆ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ

ಕೋಟ: ಆರೋಗ್ಯವಂತ ಸಮಾಜ ನಿರ್ಮಾಣದ ಕಾರ್ಯದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಕಾರ್ಯ ಅನನ್ಯ ಎಂದು ಕೋಟ ಸಮುದಾಯ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಹೇಳಿದ್ದಾರೆ
ಬುಧವಾರ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಹಂದಟ್ಟು ಚೆಚ್ಚಕೆರೆ
ಅಂಗನವಾಡಿಯಲ್ಲಿ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ,ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ,ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ
,ಕೋಟತಟ್ಟು ಗ್ರಾಮಪಂಚಾಯತ್ ಇವರ ಆಶ್ರಯದಲ್ಲಿ ಪೋಷಣ್ ಅಭಿಯಾನ
ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿ ಸರಕಾರ ರೂಪಿಸಿರುವ ಪೋಷಣ್
ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಗರ್ಭಿಣಿಯರ ಹಾಗೂ
ಮಕ್ಕಳ ಪೌಷ್ಟಿಕ,ಪ್ರೋಟೀನ್ ಯುಕ್ತ ಆಹಾರದ ಕ್ರಮಕ್ರಮಗಳ
ಕುರಿತು ಜಾಗೃತಿ ಮೂಡಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.
ಪ್ರಸ್ತುತ ಕಾಲಘಟ್ಟದಲ್ಲಿ ಬಣ್ಣಬಣ್ಣದ ಆಹಾರ ಕ್ರಮಗಳಿಗೆ ಮಾರುಹೋಗಿ
ತಮ್ಮ ಆರೋಗ್ಯವನ್ನು ಹಾನಿಗೊಳಿಸಿಕೊಳ್ಳುತ್ತಿದ್ದಾರೆ ಇದು ವಿಷಾಧನೀಯ
ಬೆಳವಣಿಗೆ ತಾಯಂದಿರರು ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳುವ ಕಾರ್ಯ
ಮಾಡಬೇಕಿದೆ ತನ್ಮೂಲಕ ಸದೃಢ ಆರೋಗ್ಯವಂತ ಪರಿಸರ ನಿರ್ಮಾಣದಲ್ಲಿ
ಕೈಜೋಡಿಸಲು ಉಲ್ಲೇಖಿಸಿದರಲ್ಲದೆ ಹೆಚ್ಚು ಹೆಚ್ಚು ಮನೆಯಲ್ಲೆ ಬೆಳೆದ
ಸಾವಯೊವ ಸೋಪುö್ಪ ತರಕಾರಿಯುಕ್ತ ಆಹಾರ ಸೇವಿಸಬೇಕು,ಆಗಾಗ
ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಕೊಳ್ಳಬೇಕು ,ಸರಕಾರಗಳು
ರೂಪಿಸುವ ಆರೋಗ್ಯ ಕಾಡ್೯ ಮಾಹಿತಿ ಪಡೆದು ಅದನ್ನು
ಅನುಷ್ಠಾನಗೊಳಿಸಿಕೊಳ್ಳಲು ಕರೆಇತ್ತರು.

ಕಾರ್ಯಕ್ರಮವನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ
ದಿನೇಶ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ ವಹಿಸಿದ್ದರು.
ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಸದಸ್ಯೆ
ಜ್ಯೋತಿ,ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ, ಕೋಟ ಸಮುದಾಯ
ಆರೋಗ್ಯ ಕೇಂದ್ರದ ಸಹಾಯಕ ಹರಿಶ್ಚಂದ್ರ ನಾಯಕ್, ವಿ ಆರ್ ಡಬ್ಲುö್ಯ
ಮನೀಶ್, ಕೋಟತಟ್ಟು ಕೋಟ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ
ಅಂಗನವಾಡಿ ಬಾಲವಿಕಾಸ ಸಮಿತಿ ಸದಸ್ಯರು, ಸ್ತ್ರೀ ಶಕ್ತಿ ಸದಸ್ಯರು, ಪೋಷಕರು
ಉಪಸ್ಥಿತರಿದ್ದರು.

ಪೋಷಣ್ ಅಭಿಯಾನ್ ವಿಶೇಷತೆ
ಆಯುರ್ವೇದ ವಸ್ತುಗಳಾದ ಅಮೃತ್ ಬಳ್ಳಿ, ವಿಳ್ಳೆದಲೆಬಳ್ಳಿ, ಅಲವೇರ,
ನುಕ್ಕಿ,ಆಡುಸೊಗಿ, ವಿಟಮಿನ್ ಸೊಪುö್ಪ,ಪೊಪ್ಪಾಯಿ ಸೊಪುö್ಪ,ವಿವಿಧ ತರಹದ
ತರಕಾರಿ ವಸ್ತುಗಳು,ಹಣ್ಣುಗಳು,ಗರ್ಭಿಣಿಯರಿಗೆ ನೀಡುವ ಹಳದಿ
ಹಣ್ಣುಗಳು,ಬೆಳೆಕಾಳುಗಳು ಗಮನ ಸೆಳೆದವು,
ನವಗ್ರಹ ದೇವಳದಿಂದ ಹಂದಟ್ಟು ಪರಿಸರದವರೆಗೆ ಪುಟಾಣಿಗಳು
ಸೇರಿದಂತೆ ಪೋಷಕ ವೃಂದ ಜಾಥ ನಡೆಯಿತು.

ಹಂದಟ್ಟು ಚೆಚ್ಚಕೆರೆ ಅಂಗನವಾಡಿಯಲ್ಲಿ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ
ಇಲಾಖೆ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ,ಶಿಶು ಅಭಿವೃದ್ಧಿ
ಯೋಜನೆ ಬ್ರಹ್ಮಾವರ ,ಕೋಟತಟ್ಟು ಗ್ರಾಮಪಂಚಾಯತ್ ಇವರ ಆಶ್ರಯದಲ್ಲಿ
ಪೋಷಣ್ ಅಭಿಯಾನ ಯೋಜನೆ ಕಾರ್ಯಕ್ರಮ ಜರಗಿತು.
ಕೋಟ.ಸೆ೧೪ ಪೋಷಣ್

 
 
 
 
 
 
 
 
 
 
 

Leave a Reply