ಕಳವು ಪ್ರಕರಣ ಆರೋಪಿಗೆ ನ್ಯಾಯಾಲಯದಿಂದ ಶಿಕ್ಷೆ

ದಿನಾಂಕ 16-03-2020 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಮಾನ್ಯ ಕಾರ್ಕಳ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ರಿ ಗ್ರಾಮದ, ಅಡಾಲ್ ಬೆಟ್ಟು ಎಂಬಲ್ಲಿ ಜಯ ಶಂಕರ ಇವರ ಅಕ್ಕ ದಿ. ಲಕ್ಷ್ಮಿ ಶೆಡ್ತಿಯ ಬೀಗ ಹಾಕಿರುವ ಮನೆಯ ಹಿಂದುಗಡೆ ಬಾಗಿಲನ್ನು ಬಲಾತ್ಕಾರವಾಗಿ ದೂಡಿ ಆರೋಪಿತರುಗಳು ಮನೆಯ ಒಳಗೆ ಹೋಗಿ ಕೋಣಿಯ ಗೋದ್ರೆಜ್ನ ಬಾಗಿಲನ್ನು ತೆರೆದು ಅದರೊಳಗೆ ಚಿನ್ನವಿರಬಹುದು ಎಂದು ಬಟ್ಟೆ ಬರೆಗಳನ್ನ ಚೆಲ್ಲಾಪಿಲ್ಲಿ ಮಾಡಿ, ಅಡುಗೆ ಕೋಣೆಯಲ್ಲಿದ್ದ ಸುಮಾರು 2000 ಮೌಲ್ಯದ ರೆಗುಲೇಟರ್ ಇರುವ ಎರಡು ಒಲೆಯ ಗ್ಯಾಸ್ ಸ್ಟವ್ ನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುಮಾ ಬಿ ರವರು ಆರೋಪಿಗಳಾದ ರಾಜೇಶ್ ಹೆಗ್ಡೆ ರಾಜೇಶ್ ಪೂಜಾರಿಯ ವಿರುದ್ಧ ದೋಷಾರೋಪಣೆಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಪ್ರಕರಣವನ್ನು ವಿಚಾರಣೆ ಮಾಡಿದ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ ಕಾರ್ಕಳದ ಪ್ರಭಾರ ನ್ಯಾಯಾಧೀಶರಾದ ಚೇತನಾ ಏಸ್.ಎಫ್ ರವರು ಆರೋಪಿಗಳಿಗೆ ಹೊಂಚು ಹಾಕಿ ರಾತ್ರಿಯಲ್ಲಿ ಮನೆ ಅತಿಕ್ರಮಣ ಪ್ರವೇಶ ಮಾಡಿರುವುದಕ್ಕೆ 1 ವರ್ಷ ಸಾಧಾರಣ ಸಜೆ ಮತ್ತು ತಲಾ 2000 ತಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, ಕಳ್ಳತನ ಮಾಡಿರುವುದಕ್ಕೆ 1 ವರ್ಷ ಸಾಧಾರಣ ಸಜೆ ಮತ್ತು ತಲಾ 2000 ತಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, ವಿಧಿಸಿ ತೀರ್ಪನ್ನು ನೀಡಿದ್ದು, ಸರ್ಕಾರದ ಪರವಾಗಿ ರಾಜಶೇಖರ್ ಪಿ ಶಾಮರಾವ್ ಸಹಾಯಕ ಸರ್ಕಾರಿ ಅಭಿಯೋಜಕರು ಕಾರ್ಕಳ ವಾದಿಸಿದ್ದರು.

 
 
 
 
 
 
 
 
 
 
 

Leave a Reply