ಉಡುಪಿ- ಮಣಿಪಾಲದಲ್ಲಿ ಜಿಯೋ ಟ್ರೂ 5ಜಿ ಆರಂಭ

ಉಡುಪಿ: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ಸೇವೆಗಳನ್ನು ಉಡುಪಿ-ಮಣಿಪಾಲ ಸೇರಿದಂತೆ ದೇಶದ ಎಂಟು ರಾಜ್ಯಗಳ 16 ನಗರಗಳಲ್ಲಿ ಆರಂಭಿಸಿದೆ. ಈ ಮೂಲಕ ಉಡುಪಿ-ಮಣಿಪಾಲದಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಎನಿಸಿದೆ.

“ತಂತ್ರಜ್ಞಾನವು ಒಂದು ಉತ್ತಮ ಒಗ್ಗೂಡಿಸುವ ಸಾಧನವಾಗಿದೆ. ಮಕರ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಸೇರಿದಂತೆ ಹಬ್ಬಗಳನ್ನು ಆಚರಿಸುವ ಇಂತಹ ಮಂಗಳಕರ ಸಮಯದಲ್ಲಿ ಹಲವು ರಾಜ್ಯಗಳಲ್ಲಿ ಜಿಯೋ ಟ್ರೂ 5 ಜಿ ಸೇವೆಗಳನ್ನು ಪ್ರಾರಂಭಿಸಲು ಹೆಮ್ಮೆಪಡುತ್ತದೆ. 2023ರಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ರೂಪಾಂತರ ಪ್ರಯೋಜನಗಳನ್ನು ಪ್ರತಿ ಜಿಯೋ ಬಳಕೆದಾರರು ಆನಂದಿಸಬೇಕು ಎನ್ನುವುದು ನಮ್ಮ ಗುರಿ” ಎಂದು ಎಂದು ಜಿಯೊ ವಕ್ತಾರರು ಹೇಳಿದ್ದಾರೆ.
ಉದ್ಘಾಟನೆ ಅಂಗವಾಗಿ ಜಿಯೋ ವೆಲ್ಕಮ್ ಆಫರ್ ಗ್ರಾಹಕರಿಗೆ ಲಭ್ಯವಿದ್ದು, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾ ಪಡೆಯುತ್ತಾರೆ.
“ಈ ಹೊಸ ಟ್ರೂ 5ಜಿ-ಚಾಲಿತ ನಗರಗಳು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ, ವಾಣಿಜ್ಯ ಮತ್ತು ಕೈಗಾರಿಕಾ ತಾಣಗಳಿಗೆ ಹೆಚ್ಚಿನ ಪ್ರಯೋಜವಾಗಲಿದ್ದು, ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಿಗೂ ಮಹತ್ವದ ಕೊಡುಗೆ ನೀಡಲಿದೆ ಎಂದು ವಿವರಿಸಿದ್ದಾರೆ.

 
 
 
 
 
 
 
 
 
 
 

Leave a Reply