ಬಾಯ್ಸ್ ಟ್ರೋಫಿ 2024ಕ್ಕೆ ಚಾಲನೆ

ಕೊರಗ ಸಮುದಾಯದ ಯುವಕರಲ್ಲಿ ಅಗಾಧವಾದ ಕ್ರೀಡಾ ಪ್ರತಿಭೆಗಳಿವೆ. ಅವರಿಗೆ ಉತ್ತಮ ತರಬೇತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಸರಕಾರ ಮತ್ತು ಎನ್.ಜಿ.ಓ. ಗಳು ಶ್ರಮಿಸಬೇಕು ಎಂದು ಯುವ ವಕೀಲ ಅಸದುಲ್ಲ ಕಟಪಾಡಿ ಹೇಳಿದರು.ಅವರು ಬಾಯ್ಸ್ ಕ್ರಿಕೆರ‍್ಸ್, ಚಿಟ್ಪಾಡಿ, ಉಡುಪಿ ಇದರ ವತಿಯಿಂದ ಉಡುಪಿ ಎಂ.ಜಿ.ಎA. ಕ್ರೀಡಾಂಗಣದಲ್ಲಿ ಕೊರಗ ಸಮುದಾಯದವರಿಗೆ ನಡೆದ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಶ್ರಮ ಜೀವಿಗಳೇ ಹೆಚ್ಚಿರುವ ಕೊರಗ ಸಮುದಾಯದಲ್ಲಿ ಇಂದಿನ ಯುವಕರು ಶಿಸ್ತಿನ ಜೀವನಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಕ್ರೀಡೆಯನ್ನು ತುಂಬಾ ಪ್ರೀತಿಸುವ ಇವರು ಇತರ ಸಮುದಾಯದ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.

 ಕ್ರಿಕೆಟ್ ಆಟಗಾರ ಪ್ರದೀಪ್ ಶೆಟ್ಟಿ, ಉದ್ಯಮಿ ಕಿಶೋರ್, ಬಾಯ್ಸ್ ಚಿಟ್ಪಾಡಿಯ ನಾಯಕ ಸುನಿಲ್, ಜಯರಾಮ ಬೀಡಿನಗುಡ್ಡೆ, ಶ್ಯಾಮ್, ಆನಂದ, ಜಗದೀಶ ಇದ್ದರು. ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ ಅವಿಭಜಿತ ದ.ಕ. ಜಿಲ್ಲೆಯಿಂದ ಕೊರಗಸಮುದಾಯದ ೪೪ ತಂಡಗಳು ಭಾಗವಹಿಸಿವೆ. ಪಥುಲ್ ಹಿರಿಯಡ್ಕ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply