ಸಾಮಾಜಿಕ ಕೆಲಸ ಮಾಡುವವರಿಗೆ ಉಡುಪಿಯ ಯಕ್ಷಗಾನ ಕಲಾರಂಗ ಮಾದರಿ -ಸೋದೆ ಶ್ರೀ

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ, ಪ್ರಥಮ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ಕಾರ್ಕಳ ನೂರಾಲ್‌ಬೆಟ್ಟುವಿನ ಚೈತ್ರಾ ಇವಳಿಗೆ ನಿವೃತ್ತ ಅಧ್ಯಾಪಕಾರದ ಯು. ಎಸ್. ರಾಜಗೋಪಾಲ್ ಆಚಾರ್ಯ ಮತ್ತು ಸುಶೀಲಾ ಆರ್. ಆಚಾರ್ಯ ಇವರು ತಮ್ಮ ವಿವಾಹದ ಸುವರ್ಣ ವರ್ಷಾಚರಣೆಯ ಸವಿನೆನಪಿನಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀನಿಲಯ’ವನ್ನು 14.02.2024 ರಂದು ಉದ್ಘಾಟಿಸಿ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಅನುಗ್ರಹ ಸಂದೇಶದ ನೀಡಿದರು.

ಯಕ್ಷಗಾನ ಕಲಾರಂಗದ ಸದಸ್ಯರ ಪ್ರಮಾಣಿಕತೆ ಮತ್ತು ಕ್ರಿಯಾಶೀಲತೆಗೆ ಸಮಾಜ ಸ್ಪಂದಿಸುತ್ತಿದೆ. ಸಂಸ್ಥೆಯೊoದು ನಿಸ್ಪೃಹತೆಯಿoದ ಕೆಲಸ ಮಾಡಿದರೆ ಸಮಾಜ ಅದನ್ನು ಪ್ರೋತ್ಸಾಹಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದು ಹೇಳುತ್ತಾ ದಾನಿಗಳನ್ನು ಹಾಗೂ ಸಂಸ್ಥೆಯ ಕಾರ್ಯಕರ್ತರನ್ನು ಆಶೀರ್ವದಿಸಿದರು. ಕುಮಾರಿ ಚೈತ್ರಾಳಿಗೆ ಶ್ರೀ ಮಧ್ವ ವಾದಿರಾಜ ಇಂಜಿನೀಯರಿoಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿ ಅದರ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮನೆ ನಿರ್ಮಾಣದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರಿಗೆ ಬೆಳ್ಳಿಯ ತಟ್ಟೆಯಲ್ಲಿ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

ಪ್ರಾಯೋಜಕರಾದ ಯು. ಎಸ್. ರಾಜಗೋಪಾಲ್ ಆಚಾರ್ಯರು ‘ನಾಹಂ ಕರ್ತಾ ಹರಿ ಕರ್ತಾ’ ಎಂಬ ಉಕ್ತಿಯಂತೆ ಇದಕ್ಕೆ ನಾನು ನಿಮಿತ್ತ ಮಾತ್ರ ದೇವರು ನನ್ನಿಂದ ಮಾಡಿಸಿದ್ದು, ಕಲಾರಂಗದoತಹ ಸoಸ್ಥೆಯೊoದಿಗೆ ಸೇರಿ ಕೆಲಸ ಮಾಡುವುದೇ ಸಂತೋಷದ ಸಂಗತಿ ಎoದು ಹೇಳಿದರು. ವೇದಿಕೆಯಲ್ಲಿ ಸುಶೀಲಾ ಆರ್. ಆಚಾರ್ಯ, ವೇಣುಗೋಪಾಲ ಭಟ್, ಡಾ. ಜೆ.ಎನ್. ಭಟ್, ಯು. ಶ್ರೀಧರ್, ಗುರುರಾಜ ಆಚಾರ್ಯ, ಮಾಧವ ಆಚಾರ್ಯ, ಪ್ರಸಾದ್ ರಾವ್, ಭಾಗ್ಯಲಕ್ಷ್ಮೀ ಪಿ. ರಾವ್, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವರಾವ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾಪೋಷಕ್‌ನ ಕಾರ್ಯಕ್ರಮಗಳ ಛಾಯಾ ಚಿತ್ರಗಳನ್ನು ಸೇವಾ ರೂಪದಲ್ಲಿ ದಾಖಲಿಸುತ್ತಿರುವ ಸರಿಗಮ ಸ್ಟುಡಿಯೋದ ಮಾಲಕರಾದ ಗಣೇಶ್ ಎನ್. ಅಮೀನ್ ಇವರನ್ನು ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಕಿಶೋರ್ ಕನ್ನರ್ಪಾಡಿ, ಎಸ್. ಗಣರಾಜ್ ಭಟ್, ಭುವನಪ್ರಸಾದ್ ಹೆಗ್ಡೆ, ಮಂಜುನಾಥ ಹೆಬ್ಬಾರ್, ವಿದ್ಯಾಪ್ರಸಾದ್, ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಕಿಶೋರ್ ಸಿ. ಉದ್ಯಾವರ, ಅಶೋಕ ಎಮ್., ಗಣೇಶ್ ಬ್ರಹ್ಮಾವರ, ಆನಂದ ಶೆಟ್ಟಿ, ನಾಗರಾಜ ಹೆಗಡೆ, ರಾಜೀವಿ ಉಪಸ್ಥಿತರಿದ್ದರು.

ಯು. ಎಸ್. ರಾಜಗೋಪಾಲ್ ಆಚಾರ್ಯರ ಮೊಮ್ಮಕ್ಕಳಾದ ಧೀಮಹಿ ಮತ್ತು ವಿದ್ಮಹಿ ಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.

 
 
 
 
 
 
 
 
 
 
 

Leave a Reply