ನಾಪತ್ತೆಯಾಗಿದ್ದ ವ್ಯಕ್ತಿಯ ಸ್ಕೂಟರ್ ಬಾರ್ಕೂರು ಸೇತುವೆ ಬಳಿ ಪತ್ತೆ

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಲ್ಲಿನ ಕೆಮ್ಮಣ್ಣು ನಿವಾಸಿ ಪ್ರವೀಣ್ ಅಮೀನ್ (45) ಅವರ ಸ್ಕೂಟರ್ ಬಾರ್ಕೂರು ಸೇತುವೆ ಬಳಿ ಪತ್ತೆಯಾಗಿದ್ದು ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಪ್ರವೀಣ್ ಅಮೀನ್ ಅವರು ಅ.18 ರಂದು ರಾತ್ರಿ ತನ್ನ ಸ್ಕೂಟರ್ ಸಮೇತ ಕಾಣೆಯಾಗಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬಾರಕೂರು ಸೇತುವೆ ಬಳಿ ಪ್ರವೀಣ್ ಅವರ ಸ್ಕೂಟರ್ ಪತ್ತೆಯಾದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಅವರು ನಾಪತ್ತೆಯಾಗುವ ಮುನ್ಮ ಡೆತ್ ನೋಟನ್ನು ಬರೆದು ಮನೆಯಲ್ಲಿಟ್ಟಿದ್ದರು.ಈ ಹಿನ್ನೆಲೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ,ಲೋಕೇಶ್ ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ನದಿಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

 
 
 
 
 
 
 
 
 
 
 

Leave a Reply