ಉಡುಪಿ : ನಿಯಂತ್ರಣ ತಪ್ಪಿ ಬೈಕ್ ಪಲ್ಟಿ; ಯುವಕ ಸಾವು

ಬೈಕೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಸವಾರ 21 ವರ್ಷದ ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ನಿಟ್ಟೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಸ್ವಸ್ತಿಕ್(21) ಎಂದು ಗುರುತಿಸಲಾಗಿದೆ. ಮಾರ್ಚ್ 8ರ ನಸುಕಿನಲ್ಲಿ ಸ್ವಸ್ತಿಕ್ ತನ್ನ ಬೈಕಿನಲ್ಲಿ ನಿಟ್ಟೂರಿನಿಂದ ಉಡುಪಿಯ ಕಡೆಗೆ ಸಾಗುತ್ತಿದ್ದಾಗ ಕಾಂಚನ ಹುಂಡೈ ಶೋರೂಮ್ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಸ್ವಸ್ತಿಕ್ ನನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

 
 
 
 
 
 
 
 
 
 
 

Leave a Reply