ಮಂಗಳೂರು : ಹಿಟ್ & ರನ್; ಸ್ಥಳದಲ್ಲೇ ಯುವತಿ ಸಾವು, ನಾಲ್ವರಿಗೆ ಗಾಯ!

ಫುಟ್ ಪಾತ್​​ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಗಾಯಗೊಂಡು, ಓರ್ವ ಯುವತಿ ಸಾವನ್ನಪ್ಪಿ ಘಟನೆ ಮಂಗಳೂರಿನ ಲೇಡಿಹಿಲ್​​ ನಲ್ಲಿ ನಡೆದಿದೆ. ಲೇಡಿಹಿಲ್ ನಲ್ಲಿ ಫುಟ್ ಬಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದರು, ಈ ವೇಳೆ ಇಯಾನ್ ಕಾರು  ಏಕಾಏಕಿ ಫುಟ್ ಪಾತ್ ಮೇಲೆ ನುಗ್ಗಿ ಸುಮಾರು ಐದು ಮಂದಿಗೆ ಡಿಕ್ಕಿಯಾಗಿದೆ. ಘಟನೆಗೆ ಚಾಲಕನ ವೇಗದ ಮತ್ತು ನಿರ್ಲಕ್ಷ್ಯದ ಕಾರಣ ಎನ್ನಲಾಗಿದೆ.

ಘಟನೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರೂಪಶ್ರೀ(23) ಎಂಬ ಯುವತಿ ಸಾವನ್ನಪ್ಪಿದ್ದು, ಸ್ವಾತಿ (26), ಹಿತನ್ವಿ (16), ಕಾರ್ತಿಕಾ (16), ಯತಿಕಾ (12) ಎಂಬುವವರು ಗಾಯಗೊಂಡಿದ್ದಾರೆ. ಘಟನೆಯಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಲ್ಲಿ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಆ ಬಳಿಕ ತಂದೆಯ ಜೊತೆ ಠಾಣೆಗೆ ಬಂದು ಶರಣಾಗತಿಯಾಗಿದ್ದಾನೆ.

 
 
 
 
 
 
 
 
 
 
 

Leave a Reply