ಉಡುಪಿ : ಮುಖ್ಯೋಪಾಧ್ಯಾಯಿನಿ ಶಾಂತಾ ಮನೋಹರ್ ನಿಧನ

ಕಲ್ಯಾಣಪುರ : ಮಣಿಪಾಲ ಮಾಧವಕೃಪ ಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಶಾಂತಾ ಮನೋಹರ್ (73 ವರ್ಷ ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನವರಿ 21 ರಂದು ನಿಧನಹೊಂದಿದರು.

ಮೃದುಭಾಷಿ , ಶಾಂತ ಸ್ವಭಾವದ ಇವರು ಸಹಸ್ರಾರು ವಿಧ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ರೂ ಹಾಗೂ ಶಾಲೆಯಲ್ಲಿ ಸಹೃದಯದ ಸಹೋದ್ಯೋಗಿಯಾಗಿದ್ದರು. ಇವರು ದಿ. ಮನೋಹರ್ ಮಲ್ಪೆ ಅವರ ಧರ್ಮಪತ್ನಿ ಮೃತರು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply