ಖಾಸಗಿ ಬಸ್‌ ಮತ್ತು ಬೈಕ್‌ ನಡುವೆ ಡಿಕ್ಕಿ: ಬೈಕ್‌ ಸವಾರ ಮೃತ್ಯು

ಮಂಗಳೂರು-ಮೂಡುಬಿದಿರೆ ರಸ್ತೆಯ ಗುರುಪುರ ಪೇಟೆ ಬಳಿ ಖಾಸಗಿ ಬಸ್ಸು ಪಿಕಪ್ ವಾಹನ, ಶಾಲಾ ಬಸ್ಸಿಗೆ ಹಾಗೂ ಬೈಕ್‌ಗೆ ಢಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಗಂಭೀರ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ ಘಟನೆ ಗುರುವಾರ
ಬೆಳಗ್ಗೆ ಸುಮಾರು 9.15ಕ್ಕೆ ನಡೆದಿದೆ.

ಬೈಕ್ ಸಾವರ ಪೊಳಲಿಯ ಕರಿಯಂಗಳ ಗ್ರಾಮದ ದಿ| ಅಣ್ಣಿ ಪೂಜಾರಿ ಅವರ ಪುತ್ರ ಸಂತೋಷ್ (34) ಮೃತಪಟ್ಟವರು. ಅವರು 8 ತಿಂಗಳ ಹೆಣ್ಣು ಮಗು ಹಾಗೂ ಪತ್ನಿ
ತಾಯಿ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಸಂತೋಷ್ 2021 ರ ಡಿಸೆಂಬರ್ ತಿಂಗಳಿನಲ್ಲಿ ಮದುವೆಯಾಗಿದ್ದರು.

ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರಾಗಿದ್ದರು. ಗುರುಪುರ ಸಹಕಾರಿ ಸೇವಾ ವ್ಯವಸಾಯ
ಸಂಘದ ವಾಮಂಜೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಗುರುಪುರ
ಸಹಕಾರಿ ಸಂಘದ ಎದುರು ರಸ್ತೆ ಉಬ್ಬು ಸಮೀಪ ಖಾಸಗಿ ಬಸ್, ನಿಕಪ್ ವಾಹನ, ಶಾಲಾ ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಬೈಕ್ ಗೆ ಢಿಕ್ಕಿಯಾದ ಕಾರಣ ಬೈಕ್ ಹಾಗೂ
ಸವಾರನನ್ನು ಸುಮಾರು ದೂರ ಬಸ್ ಎಳೆದುಕೊಂಡು ಹೋಗಿತ್ತು. ಇದರಿಂದ
ಸಂತೋಷ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಶಾಲಾ ಬಸ್ಸಿನ ಹಿಂಬದಿಗೆ ಹಾನಿಯಾಗಿದೆ.

ಘಟನೆ ಖಂಡಿಸಿ ಗುರುವಾರ ಬೆಳಗ್ಗೆ ಮಳೆಯನ್ನೂ ಲೆಕ್ಕಿಸದೆ ಸಾರ್ವಜನಿಕರು ಕೈಕಂಬದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

100ಕ್ಕೂ ಹೆಚ್ಚು ಮಂದಿ ಕೈಕಂಬ ಜಂಕ್ಷನ್ನಲ್ಲಿ ಸೇರಿದ್ದು ಮಳೆಯ ನಡುವೆಯೂ ರಸ್ತೆ ತಡೆ ನಡೆಸಿದ್ದಾರೆ, ಸ್ಥಳಕ್ಕೆ ಆರ್ ಟಿಓ ಅಥವಾ ಜಿಲ್ಲಾಧಿಕಾರಿ ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ಬಜ್ಪೆ ಪೊಲೀಸರು ಬಸ್ಸಿನ ವೇಗಕ್ಕೆ ಕಡಿವಾಣ ಹಾಕುತ್ತೇವೆಂದು ಹೇಳಿದರೂ, ಜನರು ಬಿಡಲಿಲ್ಲ. ಕೊನೆಗೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಬಂದು ಖಾಸಗಿ ಬಸ್ಸುಗಳ ವೇಗಕ್ಕೆ ಕಡಿವಾಣ ಹಾಕೋದು ಸೇರಿದಂತೆ ಅವರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಎಡಪದವಿನಲ್ಲಿ ರಕ್ಷಿತ್ ಎಂಬ ಯುವಕ ಬೈಕಿಗೆ ಬಸ್ ಡಿಕ್ಕಿಯಾಗಿ ಸಾವು ಕಂಡಿದ್ದ. ಬುಧವಾರ ಬೆಳಗ್ಗೆ ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಎಂಬ ಯುವಕ ಬೈಕಿನಲ್ಲಿ ಸಾಗುತ್ತಿದ್ದಾಗ ಮೂಡುಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಗುರುಪುರದಲ್ಲಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ. ಸಂತೋಷ್ ಕುಮಾರ್ ವಾಮಂಜೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದು ಎಂದಿನಂತೆ ಬೈಕಿನಲ್ಲಿ ಸಾಗುತ್ತಿದ್ದಾಗ ಬಸ್ ಡಿಕ್ಕಿಯಾಗಿತ್ತು. ಬಸ್ ಚಾಲಕನ ಧಾವಂತವೇ ಅಪಘಾತಕ್ಕೆ ಕಾರಣವಾಗಿತ್ತು.

ಮಂಗಳೂರು- ಮೂಡುಬಿದ್ರೆ ಮಧ್ಯೆ ಖಾಸಗಿ ಬಸ್ಸುಗಳದ್ದೇ ಕಾರುಬಾರು ಆಗಿದ್ದು, ಸಮಯ ಪಾಲನೆ ನೆಪದಲ್ಲಿ ವೇಗಕ್ಕೆ ನಿಯಂತ್ರಣ ಇಲ್ಲದೆ ಚಲಾಯಿಸುತ್ತಾರೆ. ಕರ್ಕಶ ಹಾರ್ನ್ ಕೇಳಿದರೆ, ಎದುರಿನಲ್ಲಿದ್ದ ವಾಹನಗಳು ರಸ್ತೆಯನ್ನೇ ಬಿಟ್ಟುಕೊಡುವಷ್ಟರ ಮಟ್ಟಿಗೆ ಖಾಸಗಿ ಬಸ್ಸುಗಳ ಕಿರಿಕಿರಿ ಇರುತ್ತದೆ. ಬಸ್ ಚಾಲಕರ ಧಾವಂತಕ್ಕೆ ಈ ದಾರಿಯಲ್ಲಿ ಹಲವು ಹೆಣಗಳು ಬಿದ್ದರೂ, ಅಧಿಕಾರಿ ವರ್ಗ ಈ ರಸ್ತೆಯಲ್ಲಿ ಸರ್ಕಾರಿ ಬಸ್ ಇಳಿಸಲು ಮುಂದಾಗಿಲ್ಲ. ಪ್ರತಿ ಬಾರಿ ಈ ಕುರಿತ ಪ್ರಸ್ತಾಪ ಬಂದಾಗಲೂ ಖಾಸಗಿ ಲಾಬಿಗೆ ಮಣಿದು ಸರ್ಕಾರಿ ಬಸ್ ಚಾಲನೆಯನ್ನು ಮುಂದಕ್ಕೆ ಹಾಕುತ್ತಾರೆ. ಈಗ ಸಾರ್ವಜನಿಕರೇ ಖಾಸಗಿ ಬಸ್ ಸಾಕು, ಸರ್ಕಾರಿ ಬಸ್ ಇಳಿಸಿ ಎಂದು ಆಗ್ರಹ ಮಾಡುತ್ತಿದ್ದಾರೆ.

 
 
 
 
 
 
 
 
 
 
 

Leave a Reply