ನೇತ್ರದಾನಕ್ಕೆ ಒಂದೇ ದಿನ 1000 ಕ್ಕೂ ಅಧಿಕ ಮಂದಿ ನೋಂದಣಿ: ಅಪ್ಪು ಪ್ರೇರಣೆ :

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ನಿಧನವಾದ ಬಳಿಕ ಜನರಲ್ಲಿ ಹೃದಯಾಘಾತದ ಭಯ ಶುರುವಾಗಿದೆ.‌ ಜನರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆಯನ್ನು ಮಾಡಿಸಿ ಕೊಳ್ಳುತ್ತಿದ್ದಾರೆ. ಪುನೀತ್ ಸಾವಿನಿಂದ ಕೆಲವರು ಭಯ ಪಟ್ಟು ಕೊಂಡರೆ, ಇನ್ನೂ ಹಲವರು ಪುನೀತ್ ಮಾಡಿದ ನೇತ್ರದಾನದಿಂದ ಪ್ರೇರಣೆಗೊಂಡು ತಾವು ನೇತ್ರದಾನ ಮಾಡಲು ಮುಂದಾಗಿದ್ದಾರೆ.
 

ನಟ ಪುನೀತ್ ರಾಜ್‍ಕುಮಾರ್ ನೇತ್ರದಾನದ ಬಳಿಕ ಪುನೀತ್ ರಿಂದ ಪ್ರೇರಣೆಗೊಂಡು ಸಾಕಷ್ಟು ಜನರು ನೇತ್ರ ದಾನ ಮಾಡಲು ಬರುತಿದ್ದಾರೆ. ಇಂದು ಒಂದೇ ದಿನ 1000 ಕ್ಕೂ ಹೆಚ್ಚು ಜನರಿಂದ ನೇತ್ರದಾನದ  ನೋಂದಣಿ ಮಾಡಿಕೊಳ್ಳಲಾಗಿದೆ. ಈ ಹಿಂದೆ ಇಷ್ಟು ಜನರು ನೇತ್ರದಾನಕ್ಕೆ ಮುಂದೆ ಬರುತ್ತಿರಲಿಲ್ಲ. ಇದೀಗ 2, 3 ದಿನದಿಂದ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ‌.  ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರ ತಂದೆಯ ಹಾದಿಯಲ್ಲಿ ನಡೆದು ನೇತ್ರದಾನ ಮಾಡಿದ್ದಾರೆ. ಪುನೀತ್ ಕಣ್ಣುಗಳು ಹೆಚ್ಚು ಆರೋಗ್ಯ ವಾಗಿರುವುದರಿಂದ 4 ಜನರ ಪಾಲಿನ ದೀಪವಾಗಿದೆ. ನೇತ್ರದಾನ ಮಾಡುವವರ 2 ಕಣ್ಣುಗಳು ತುಂಬಾ ಆರೋಗ್ಯವಾಗಿದ್ದರೆ ಕಾರ್ನಿಯಾವನ್ನು 4  ಭಾಗ ಮಾಡಬಹುದು. ಕಾರ್ನಿಯವನ್ನು ಒಂದು ಗ್ಲಾಸ್ ಎಂದು ಊಹಿಸಿದರೆ ಅದರಲ್ಲಿ ಮುಂಭಾಗ ಮತ್ತು ಹಿಂಭಾಗ ಇರುತ್ತದೆ. ಮುಂಭಾಗದ ಕಣ್ಣಿನ ಸಮಸ್ಯೆ ಇರುವ ವರಿಗೆ ಮುಂಭಾಗ , ಹಿಂಭಾಗದ ಕಣ್ಣಿನ ಸಮಸ್ಯೆ ಇರುವವರಿಗೆ ಹಿಂಭಾಗವನ್ನು ಅಳವಡಿಸಲಾಗುತ್ತದೆ.

ಈ ರೀತಿಯಾಗಿ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳು 4 ಜನರಿಗೆ ಬಳಸಲಾಗಿದೆ. 4  ಜನರ ಜೀವನಕ್ಕೆ ಪುನೀತ್ ರಾಜ್ ಕುಮಾರ್ ಅವರ ಅಮೂಲ್ಯವಾದ ಕಣ್ಣುಗಳು  ಬೆಳಕಾಗಿವೆ. ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದಿಂದ ಅಭಿಮಾನಿಗಳು ಪ್ರೇರಣೆಗೊಂಡು ತಾವು ನೇತ್ರ ದಾನವನ್ನು ಮಾಡುತ್ತಿದ್ದಾರೆ. ಅದೂ ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿಗಳಾಗುತ್ತಿವೆ. ಏನೇ ಆದರು ಪುನೀತ್ ರಾಜ್ ಕುಮಾರ್ ನಿಧನರಾದ ಮೇಲು ತಮ್ಮ ಉತ್ತಮ ಆದರ್ಶ ಗಳಿಂದ  ಹೇಗೆ ಬದುಕ ಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

 
 
 
 
 
 
 
 
 
 
 

Leave a Reply