ಕೋಟ-ಕೃಷಿತನದ ಅರಿವು ಎಲ್ಲರಿಗೂ ಅಗತ್ಯ – ಪ್ರಗತಿಪರ ಕೃಷಿಕ ರವೀಂದ್ರ ಐತಾಳ

ಕೋಟ: ಎಳೆವೆಯಲ್ಲಿಯೇ ಕೃಷಿತನದ ಅರಿವು ಮೂಡಿಸಿದರೆ ವಿದ್ಯಾರ್ಥಿಗಳಲ್ಲಿ ಕೃಷಿಕ್ಷೇತ್ರದ ಕುರಿತು ಆಸಕ್ತಿ ಬೆಳೆಯಲು ಸಾಧ್ಯ. ಜೊತೆಗೆ ಪರಿಸರ ಪ್ರೀತಿಯನ್ನು ಮೇಳೈಸಿಕೊಂಡರೆ ಕೃಷಿಯ ಏಳಿಗೆ ಸಾಧ್ಯ ಎಂದು ಪ್ರಗತಿಪರ ಕೃಷಿಕ ರವೀಂದ್ರ ಐತಾಳ ನುಡಿದರು. ಅವರು ವಿವೇಕ ಬಾಲಕಿಯರ ಪ್ರೌಢಶಾಲೆಯ ನಂದನ-ಇಕೋಕ್ಲಬ್ ಆಸರೆಯಲ್ಲಿ ನಡೆದ ಪರಿಸರ ಪ್ರೀತಿ ಏಕೆ ಮತ್ತು ಹೇಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಆರಂಭದಲ್ಲಿ ತರಗತಿವಾರು ಪರಿಸರ ಗೀತೆ ಸ್ಪರ್ಧೆ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ ಸ್ವಾಗತಿಸಿದರೆ, ವಿದ್ಯಾರ್ಥಿನಿ ಅದಿತಿದೇವಿ ಭಟ್ ವಂದಿಸಿದರು. ಇಕೋಕ್ಲಬ್ ಕಾರ್ಯದರ್ಶಿ ಕು| ಸೌಮ್ಯ ಮತ್ತು ಸಂಚಾಲಕರಾದ ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮವನ್ನು ಸಂಘಟಿಸಿದರೆ ವಿರೋಧ ಪಕ್ಷದ ನಾಯಕಿ ಕು| ಭೂಮಿಕಾ ನಿರೂಪಿಸಿದರು.

 
 
 
 
 
 
 
 
 
 
 

Leave a Reply