ಜೂಪಿಟರ್ಸ್ ಒಪೋಸಿಷನ್

ಸಪ್ಟಂಬರ್ 26ರಂದು ಗುರು ಗ್ರಹ ವಾರ್ಷಿಕ ಸಮೀಪ ಬರಲಿದೆ. ಇದನ್ನು ಜೂಪಿಟರ್ ಒಪೊಸಿಷನ್ ಎನ್ನುವರು . ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದು ಹೋದರೂ ಈ ವರ್ಷ 70 ವರ್ಷಗಳಿಗಿಂತ ಕಡಿಮೆ ದೂರ.
ಸೂರ್ಯನ ಸುತ್ತ ದೀರ್ಘವೃತ್ತದಲ್ಲಿ ಸುತ್ತುವ ನಮ್ಮ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ.

ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿಪೂರ್ತಿ ಕಾಣಿಸುತ್ತದೆ . ಈವರ್ಷ ಈಗ 59.1 ಕೋಟಿ ಕಿಮೀ ದೂರದಲ್ಲಿ ಬರಲಿದೆ . ಇನ್ನಾರು ತಿಂಗಳಿಗೆ ಭೂಮಿಗೆ ದೂರದ ದೂರ 94 ಕೋಟಿ ಬರಲಿದೆ. ಹಾಗಾಗಿ ಬರೆ ಕಣ್ಣ್ಗೆ ಸಂಜೆ ಪೂರ್ವ ಆಕಾಶದಲ್ಲಿ ಹೊಳೆಯುತ್ತಿದೆ. ದೂರದರ್ಶಕದಲ್ಲಿ ಈ ಗ್ರಹ ಈಗ ನೋಡಲು ಅಂದವೋಅಂದ.
ಡಾ ಎ ಪಿ ಭಟ್ ಉಡುಪಿ.

 
 
 
 
 
 
 
 
 
 
 

Leave a Reply