6 ತಾಸಿನಲ್ಲಿ ಕಮಾಲ್~ ಸಾರ್ವತ್ರಿಕ ಶ್ಲಾಘನೆ

ಜಿಲ್ಲೆಯ ಕುಂದಾಪುರದಲ್ಲಿ ಕೆರೆಯಯಂತಾಗಿದ್ದ ರಾ.ಹೆ. 66ರ ಪ್ಲೈ‌ ಓವರ್ ಪಕ್ಕದ ರಸ್ತೆ ಕೇವಲ 6 ತಾಸುಗಳಲ್ಲಿ ದುರಸ್ತಿಯಾಗಿದೆ. ಮಧ್ಯಾಹ್ನವಷ್ಟೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಸ್ತೆ ದುರಸ್ತಿಗೆ ಮೌಕಿಕ ಆದೇಶ ನೀಡಿದ್ದರು.  ಸಂಜೆಯ ವೇಳೆಗೆ ರಸ್ತೆ ರೆಡಿಯಾಗಿ, ಸಚಿವರು ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿದ್ದಾರೆ

ನಿನ್ನೆ ಕುಂದಾಪುರದಲ್ಲಿ ಮೀನುಗಾರಿಕೆ ಇಲಾಖೆಯ ಕಾರ್ಯಕ್ರಮವೊಂದನ್ನು ಮುಗಿಸಿ ಮಂಗಳೂರಿನತ್ತ ತೆರಳುತ್ತಿದ್ದ ಹಿಂದು ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರನ್ನು ಕುಂದಾಪುರದ ಬಸ್ರೂರು ಮೂರುಕೈ ಫ್ಲೈ ಓವರ್ ಬಳಿ ಪ್ರತಿಭಟನಾಕಾರರು ತಡೆದಿದ್ದರು. ಕೆರೆಯಂತಾದ ರಾಷ್ಟ್ರೀಯ ಹೆದ್ದಾರಿಯನ್ನು ತೋರಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸಚಿವರು ಸ್ವತಃ ಅಲ್ಲಿ ನಡೆದು, ಜನರ ಸಮಸ್ಯೆಯನ್ನು ಅರಿತುಕೊಂಡರು.

ತಕ್ಷಣ ಸ್ಥಳದಿಂದಲೇ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿ, ತುರ್ತಾಗಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರಬೇಕು, ಬಾರದೆ ಇದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮೌಕಿಕ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ಚುರುಕಾಗಿ ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಕುಂದಾಪುರ ಉಪ ವಿಭಾಗ ಅಧಿಕಾರಿ ರಾಜು ಕೆ. ಅವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ತುರ್ತಾಗಿ ರಸ್ತೆಯನ್ನು ರಿಪೇರಿ ಮಾಡಿಸಿದ್ದಾರೆ.

ಕೇವಲ 6 ತಾಸುಗಳೊಳಗೆ ರಾ.ಹೆ. 66ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ, ಸಾರ್ವಜನಿಕರು ಅನುಭವಿಸುತ್ತಿದ್ದ ಸಮಸ್ಯೆಯೊಂದನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತಂದಾಗ, ಕೆಲವೇ ಕೆಲವು ತಾಸುಗಳಲ್ಲಿ ಪರಿಹಾರ ಮಾಡಿಸಿದ್ದಾರೆಂದು ಪ್ರತಿಭಟನಾ ಕಾರರ ಸಹಿತ, ಕುಂದಾಪುರದ ಸಾರ್ವಜ ನಿಕರ ಸಾರ್ವತ್ರಿಕ ಶ್ಲಾಘನೆಗೆ ಸಚಿವರು ಪಾತ್ರರಾಗಿದ್ದಾರೆ. ಅದರೊಂದಿಗೆ ಸಚಿವ ಕೋಟ ಅವರನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ.

 
 
 
 
 
 
 
 
 
 
 

Leave a Reply