ಕೋವಿಡ್ ಜಾಗೃತಿ ಮೂಡಿಸು ವಲ್ಲಿ ಮಾಧ್ಯಮಗಳ ಮುಂಚೂಣಿಯ ಪಾತ್ರ~ ಸಿಎಂ

ಜೀ ಕನ್ನಡ ವಾಹಿನಿ ವತಿಯಿಂದ ಇಂದು ಕೋವಿಡ್ ನಿರ್ವಹಣೆಗಾಗಿ 20 ಆಂಬುಲೆನ್ಸ್, 25 ಎಚ್.ಎಫ್.ಎನ್.ಸಿ ಯಂತ್ರಗಳು ಮತ್ತು 4,000 ಪಿಪಿಇ ಕಿಟ್ ಗಳನ್ನು ರಾಜ್ಯ ಸರ್ಕಾರ ಕ್ಕೆ ಹಸ್ತಾಂತರಿಸಲಾಯಿತು.

ಜ಼ೀ ವಾಹಿನಿಯ ಪ್ರತಿನಿಧಿಯಿಂದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಉಪಕರಣ ಗಳನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂ ರಪ್ಪ, ಕೋವಿಡ್ ವಿರುದ್ಧ ಹೋರಾಟದಲ್ಲಿ ಮಾಧ್ಯಮಗಳ ಪಾತ್ರ ಶ್ಲಾಘನೀಯ.

ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸು ವಲ್ಲಿ ಮಾಧ್ಯಮಗಳು ಮುಂಚೂಣಿಯ ಪಾತ್ರವನ್ನು ವಹಿಸಿದರೆ ಸರಕಾರದ ಕೆಲಸಕ್ಕೆ ಇಂಧನ ದೊರೆಯುವುದು. ಸಮಾಜದ ಒಳಿತಿಗಾಗಿ ಮಾಧ್ಯಮಗಳು ಕ್ರಿಯಾಶೀಲ ಪ್ರಯತ್ನ ನಡೆಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಸಚಿವರುಗಳಾದ ಆರ್.ಅಶೋಕ್, ಡಾ. ಸುಧಾಕರ್, ಶ್ರೀರಾಮುಲು, ಎಸ್.ಟಿ. ಸೋಮಶೇಖರ್, ಮಾಜಿ ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply