ಕಾಪು: ಹೊಸ ಮಾರಿ ಗುಡಿಯಲ್ಲಿ ಕೋವಿಡ್ 19 ನಿಂದಾಗಿ ಕಾಲಾವಧಿ ಆಟಿ ಮಾರಿಪೂಜೆ ಸರಳ ರೀತಿಯಲ್ಲಿ ಆಚರಿಸಲ್ಪಟ್ಟಿತು. ಕೇವಲ ಅರ್ಚಕರು ಹಾಗು ಸಿಬ್ಬಂದಿಗಳು ಮಾತ್ರ ಭಾಗವಹಿಸಿದ್ದರು. ಸಾರ್ವಜನಿಕರಿಗೆ ಮಾರಿಗುಡಿ ಪ್ರವೇಶಿಸಲು ಅವಕಾಶವಿರಲಿಲ್ಲ. ರಾತ್ರಿ 8 ಗಂಟೆಯೊಳಗೆ ಎಲ್ಲಾ ಸಂಪ್ರದಾಯಗಳನ್ನು ಮುಕ್ತಾಯಗೊಳಿಸಲಾಯಿತು.