ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯಲ್ಲಿ ಗ್ಲುಕೋಮಾ ಸಪೋರ್ಟ್ ಗ್ರೂಪ್ ಆರಂಭ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಕಾರ್ಯಕ್ರಮ

ಉಡುಪಿ: ವಿಶ್ವ ಗ್ಲುಕೋಮಾ ವಾರ 2021 ರ ಅಂಗವಾಗಿ ಡಾ. ಟಿ ಎಂ ಎ ಪೈ ಆಸ್ಪತ್ರೆ ಉಡುಪಿ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ಟೋಮೆಟ್ರಿ ವಿಭಾಗ –MCHP ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಗ್ಲುಕೋಮಾ ಸಪೋರ್ಟ್ ಗ್ರೂಪ್ನ ಆರಂಭ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗ್ಲುಕೋಮಾ ಕಾಯಿಲೆಯು ಶಾಶ್ವತ ಕುರುಡುತನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಗ್ಲುಕೋಮಾದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಗ್ಲುಕೋಮಾ ವಾರವನ್ನು ಪ್ರತಿವರ್ಷ ಮಾರ್ಚ್ ಎರಡನೇ ವಾರದಲ್ಲಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ “ವಿಶ್ವ ಪ್ರಕಾಶಮಾನವಾಗಿದೆ, ನಿಮ್ಮ ದೃಷ್ಟಿಯನ್ನು ಉಳಿಸಿಕೊಳ್ಳಿ”.


ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ,ನಿವೃತ್ತ ಶಿಕ್ಷಕಿ , ಶಿಕ್ಷಣ ತಜ್ಞೆ , ರೋಟರಿ ಕ್ಲಬ್ ಮಣಿಪಾಲದ ಮಾಜಿ ಅಧ್ಯಕ್ಷೆ ಶ್ರೀಮತಿ ಶೈಲಾ ರಾವ್ ಅವರು, “ಗ್ಲುಕೋಮಾ ಅನ್ನವುದು ಯಾವುದೇ ಲಕ್ಷಣವಿಲ್ಲದೇ ಕಂಡು ಬರುವುದರಿಂದ ಕಾಲಕಾಲಕ್ಕೆ ತಕ್ಕಂತೆ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಂದೇ ಇದಕ್ಕೆ ಮದ್ದು. ಇಂದು ಆರಂಭವಾದ ಗ್ಲುಕೋಮಾ ಸಪೋರ್ಟ್ ಗ್ರೂಪ್ ಮೂಲಕ ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮವರಿಗೆ ಮತ್ತು ಇತರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಬೇಕು” ಎಂದು ಹೇಳಿದರು.

ಗ್ಲುಕೋಮಾ ಸಪೋರ್ಟ್ ಗ್ರೂಪ್ ಅನ್ನು ಉದ್ಘಾಟಿಸಿ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ವಿನೋದ್ ಭಟ್, “ಗ್ಲುಕೋಮಾ ಸಪೋರ್ಟ್ ಗ್ರೂಪ್ ಅನ್ನು ಆರಂಭಿಸುವ ಮುಂದಾಳತ್ವವನ್ನು ವಹಿಸಿದ ತಂಡವನ್ನು ಅಭಿನಂದಿಸಿದರು. ಇದರಿಂದಾಗಿ ಮಾಹಿತಿ ವಿನಿಮಯಕ್ಕೆ ಒಂದು ಸಾಮಾನ್ಯ ವೇದಿಕೆ ದೊರಕಿದಂತಾಗಿದೆ. ರೋಗಿಗಳಿಗೆ ಜಾಗೃತಿ ಶಿಕ್ಷಣ ನೀಡಲು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಗ್ಲುಕೋಮಾ ಜಾಗೃತಿ ಕಿರುಪುಸ್ತಕವನ್ನು ಅಭಿವೃದ್ಧಿಪಡಿಸಬೇಕು” ಎಂದು ಅವರು ಸಲಹೆ ನೀಡಿದರು.

 

ಕೆ ಎಂ ಸಿ ಡೀನ್ ಡಾ.ಶರತ್ ಕುಮಾರ್ ಅವರು, “ಗ್ಲುಕೋಮಾ ಕಾಯಿಲೆಯು ನಿಶ್ಯಬ್ದ ದೃಷ್ಟಿ ಚೋರ, ಏಕೆಂದರೆ, ಇದರಲ್ಲಿ ಸಾಮಾನ್ಯವಾಗಿ ಯಾವುದೇ ಲಕ್ಷಣ ಕಂಡುಬರುವುದಿಲ್ಲ. ಆದರೆ ನಿಧಾನವಾಗಿ ದೃಷ್ಟಿ ಕಡಿಮೆಯಾಗುತ್ತ ಹೋಗುತ್ತದೆ. ಕಳೆದು ಕೊಂಡ ದೃಷ್ಟಿಯನ್ನು ಪುನಃ ಪಡೆದುಕೊಳ್ಳಲು ಸಾಧ್ಯವಿಲ್ಲ ಆದರೆ ಇರುವ ದೃಷ್ಟಿಯನ್ನು ನಿಯಮಿತ ತಪಾಸಣೆ ಮತ್ತು ಚಿಕಿತ್ಸೆಯಿಂದ ಉಳಿಸಿಕೊಳ್ಳಬಹುದು” ಎಂದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಿಓಓ ಶ್ರೀ ಸಿ.ಜಿ. ಮುತ್ತನ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಡಾ.ಟಿ.ಎಂ.ಎ. ಪೈ ಪೈ ಆಸ್ಪತ್ರೆ, ಉಡುಪಿಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಕಾಂತ್ , ಮಣಿಪಾಲದ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಲತಾ ವಿ ಭಂಡಾರಿ , ಆಪ್ಟೋಮೆಟ್ರಿ (MCHP) ಮುಖ್ಯಸ್ಥ ಡಾ. ರಮೇಶ್ ಯಸ್ ವಿ ಉಪಸ್ಥಿತರಿದ್ದರು. ಕಸ್ತೂರ್ಬಾ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಮತ್ತು ಗ್ಲುಕೋಮಾ ತಜ್ಞೆ ಡಾ. ನೀತಾ ಕೆಐಆರ್, ಗ್ಲುಕೋಮಾ ಸಪೋರ್ಟ್ ಗುಂಪಿನ ಅವಲೋಕನವನ್ನು ನೀಡಿದರು. ಡಾ.ಶಶಿಕಿರಣ್ ಉಮಕಾಂತ್ ಅವರು ಸಭೆಯನ್ನು ಸ್ವಾಗತಿಸಿ, ಡಾ.ಸುಲತಾ ವಿ ಭಂಡಾರಿ ಅವರು ವಂದಿಸಿದರು. ಸೀನಿಯರ್ ರೆಸಿಡೆಂಟ್ ಮತ್ತು ಗ್ಲುಕೋಮಾ ತಜ್ಞೆ ಡಾ. ಪ್ರಿಯಾಂಕಾ ರಮೇಶ್ ಮತ್ತು ಜೂನಿಯರ್ ರೆಸಿಡೆಂಟ್ ಡಾ.ಅಲಿಶಾ ಕುಲಕರ್ಣಿ ಕಾರ್ಯಕ್ರಮವನ್ನು ನಡೆಸಿದರು. ರೋಗಿಗಳು ಮತ್ತು ಸಂಬಂಧಿಕರಿಗೆ ಗ್ಲುಕೋಮಾ ಬಗ್ಗೆ ಶಿಕ್ಷಣ ನೀಡಲಾಯಿತು ಮತ್ತು ಉಚಿತ ಗ್ಲುಕೋಮಾ ತಪಾಸಣೆಯನ್ನು ಡಾ. ನೀತಾ ಮತ್ತು ಡಾ. ಪ್ರಿಯಾಂಕಾ, ಇತರ ನೇತ್ರಶಾಸ್ತ್ರಜ್ಞರು ಮತ್ತು ಆಪ್ಟೋಮೆಟ್ರಿಸ್ಟ್ಗಳ ಸಹಯೋಗದೊಂದಿಗೆ ಮಾಡಿದರು. ರೋಗಿಗಳಿಗೆ ಉಚಿತ ಗ್ಲುಕೋಮಾ ಔಷಧಿಗಳನ್ನು ನೀಡಲಾಗಿದ್ದು, ಗ್ಲುಕೋಮಾ ರೋಗಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಕಂಡುಬಂದಿದೆ.

 

 
 
 
 
 
 
 
 
 
 
 

Leave a Reply