ಉಡುಪಿ: ಜೂನ್ 29 ರಂದು ಲಸಿಕಾ ಲಭ್ಯತೆ ವಿವರ

ಉಡುಪಿ: ಜಿಲ್ಲೆಯಲ್ಲಿ ಜೂನ್ 29 ರಂದು ಲಸಿಕಾ ಲಭ್ಯತೆ ವಿವರ ಇಲ್ಲಿದೆ.

• ಜಿಲ್ಲೆಯಲ್ಲಿ ಜೂನ್ 29 ರಂದು ಉಡುಪಿ ನಗರ ಪ್ರದೇಶದಲ್ಲಿ ಕೊರೋನ ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯ ಇರುವುದಿಲ್ಲ.

• ನಗರ ಪ್ರದೇಶದ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ ಬೆಳಗ್ಗೆ 9.30 ರಿಂದ ಸಂಜೆ 4.30 ರ ವರೆಗೆ ಜುಲೈ 5 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ ಮಾತ್ರ 2ನೇ ಡೋಸ್ ಕೋವಿಶೀಲ್ಡ್ – 40 ಡೋಸ್ ಲಸಿಕೆ ಲಭ್ಯವಿರುತ್ತದೆ.

• ಜಿಲ್ಲೆಯಲ್ಲಿರುವ ಪದವಿ, ಡಿಪ್ಲೋಮ ಹಾಗೂ ಐ.ಟಿ ಕಾಲೇಜುಗಳ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ, ಬೋಧಕ ಸಿಬ್ಬಂದಿಗಳಿಗೆ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕಾ ಶಿಬಿರವನ್ನು ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗಳು ಹಾಗೂ ಬೆಂಬಲ ಸಿಬ್ಬಂದಿಗಳು ತಾವು ಕಲಿಯುತ್ತಿರುವ / ಕರ್ತವ್ಯ ನಿರ್ವಹಿಸುತ್ತಿರುವ ಕಾಲೇಜನ್ನು ಅಥವಾ ಕಾಲೇಜಿನ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿ ಲಭ್ಯವಿರುವ ಲಸಿಕಾ ಪ್ರಮಾಣವನ್ನು ಆಧರಿಸಿ ಲಸಿಕಾಕರಣವನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯಬಹುದು.

• ಜಿಲ್ಲೆಯಲ್ಲಿರುವ ಪದವಿ, ಡಿಪ್ಲೋಮ ಹಾಗೂ ಐ.ಟಿ ಕಾಲೇಜುಗಳ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗಳು ಹಾಗೂ ಬೆಂಬಲ ಸಿಬ್ಬಂದಿಗಳು ತಾವು ಕಲಿಯುತ್ತಿರುವ / ಕರ್ತವ್ಯ ನಿರ್ವಹಿಸುತ್ತಿರುವ ಕಾಲೇಜನ್ನು ಹೊರತುಪಡಿಸಿ ಬೇರೆ ಕಾಲೇಜುಗಳಲ್ಲಿ ಲಸಿಕೆಯನ್ನು ಪಡೆಯುವಂತಿಲ್ಲ.

• ಬೇರೆ ಜಿಲ್ಲೆಯ ಕಾಲೇಜುಗಳಲ್ಲಿ ಕಲಿಯುತ್ತಿರುವ ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಬಗ್ಗೆ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಣೆಯ ಮೂಲಕ ತಿಳಿಸಲಾಗುವುದು.

• ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply