ಡಾ.ಅನು ಡೆಂಟಲ್ & ಆಯುರ್ವೇದ: ಮಾ.8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಉಡುಪಿ: ಮಾರ್ಚ್ 8 ರಂದು ಡಾ.ಅನು ಡೆಂಟಲ್ & ಆಯುರ್ವೇದ ಮತ್ತು ಚೈತನ್ಯ ಫೌಂಢೇಶನ್ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ ಅಂಬಲಪಾಡಿ ಹೊಟೇಲ್ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ನಡೆಯಲಿದೆ. ಮಖ್ಯ ಅತಿಥಿಯಾಗಿ ಕಾಂತಾರ ಕಮಲಕ್ಕ ಎಂದೇ ಖ್ಯಾತಿ ಪಡೆದಿರುವ ಹಾಗೂ ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಅವರು ಆಗಮಿಸಲಿದ್ದಾರೆ.

“ಸಾಮಾಜಿಕ ಸ್ವಾಸ್ಥ್ಯದ ಪಾಲನೆಯಲ್ಲಿ ಮಹಿಳೆಯರ ಕೊಡುಗೆ” ಎಂಬ ವಿಷಯದ ಬಗ್ಗೆ ಪ್ರಸೂತಿ ತಜ್ಞೆ ಡಾ. ರಾಜಲಕ್ಷ್ಮೀ ಮತ್ತು ಮಧುಮೇಹ ತಜ್ಜೆ ಡಾ. ಶೃತಿ ಬಲ್ಲಾಳ್ ಅವರು ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಸುಜಾತಾ ಬಾಳಿಗ, ಅಪರ್ಣಾ ಹೆಗ್ಡೆ, ನಯನಾ ಗಣೇಶ್, ವೆರೊನಿಕಾ ಕರ್ನೇಲಿಯೋ, ಶ್ಯಾಮಲಾ ಪ್ರಸಾದ್, ಪೂರ್ಣಿಮಾ ಹಾಗೂ ನಿರೂಪಮಾ ಪ್ರಸಾದ್ ಶೆಟ್ಟಿ ಉಪಸ್ಥಿತರಿರಲಿದ್ದು ಡಾ. ಅನುಪಮಾ ಸುನೀಲ್ ಅವರು ಅಧ್ಯಕ್ಷತೆ ವಹಿಸಲಿರುವರು.

ಈ ಸಂದರ್ಭದಲ್ಲಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವೂ ನಡೆಯಲಿದೆ ಎಂದು ಚೈತನ್ಯ ಫೌಂಢೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply