​ಕೋರೋನಾ ಮುಕ್ತವಾಗುವತ್ತ ಉಡುಪಿ ಜಿಲ್ಲೆ ದಾಪುಗಾಲು ~130 ಮಂದಿ ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾನುವಾರ ಭಾರೀ ಇಳಿಮುಖ ಕಂಡಿದ್ದು, ಈಚಿನ ದಿನಗಳಲ್ಲೇ ಕನಿಷ್ಟ ಎನ್ನಬಹುದಾದ 28ಕ್ಕಿಳಿದಿದೆ. ಇದೇ ವೇಳೆ 130 ಮಂದಿ ಗುಣಮುಖ ರಾಗಿದ್ದಾರೆ. ಆದರೆ, ಬೇಸರದ ಸಂಗತಿ ಎಂದರೆ ಇಬ್ಬರು ಅಸುನೀಗಿದ್ದಾರೆ. ಪ್ರಸ್ತುತ 821 ಸಕ್ರಿಯ ಪ್ರಕರಣಗಳಿವೆ.

ಇಂದು 2,769 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಆ ಪೈಕಿ 24 ಮಂದಿ ಮನೆ ಆರೈಕೆ ಹಾಗೂ 4 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.​ ಸೋಂಕಿತರ ಪೈಕಿ ಉಡುಪಿಯ 10, ಕುಂದಾ ಪುರ 10, ಕಾರ್ಕಳ 8 ಮಂದಿ ಸೇರಿದ್ದಾರೆ. ಉಡುಪಿಯ 69 ಹಾಗೂ ಕುಂದಾಪುರದ 64ರ ಹರೆಯದ ಪುರುಷರೀರ್ವರು ಸಾವನ್ನಪ್ಪಿದ್ದಾರೆ ಎಂದು ಡಿಎಚ್.ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply