ಖ್ಯಾತ ಶ್ವಾಸಕೋಶ ರೋಗಗಳ ತಜ್ಞರಾದ ಡಾ ರಾಹುಲ್ ಮ್ಯಾಗಜೀನ್ ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯಲ್ಲಿ ಸಲಹೆ ಮತ್ತು ಸಮಾಲೋಚನೆಗೆ ಲಭ್ಯ – ಪ್ರತೀ ಗುರುವಾರ

ಉಡುಪಿ , 05 ಮಾರ್ಚ್ 2024 : ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯು ತನ್ನ ಗೌರವಾನ್ವಿತ ಆರೋಗ್ಯ ತಜ್ಞರ ಸಮಿತಿಗೆ ಶ್ವಾಸಕೋಶ ರೋಗಗಳ ತಜ್ಞರ ಸೇರ್ಪಡೆಯನ್ನು ಪ್ರಕಟಿಸಿದೆ. ಗುರುವಾರ 07, 2024 ರಿಂದ ಜಾರಿಗೆ ಬರುವಂತೆ, ಖ್ಯಾತ ಶ್ವಾಸಕೋಶ ರೋಗಗಳ ತಜ್ಞರಾದ ಡಾ ರಾಹುಲ್ ಮ್ಯಾಗಜೀನ್, ಕೆಎಂಸಿ ಮಣಿಪಾಲದ ಶ್ವಾಸಕೋಶ ರೋಗಗಳ ವಿಭಾಗದ ಪ್ರಾಧ್ಯಾಪಕರು ಪ್ರತೀ  ಗುರುವಾರ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ.

 

ಅವರು ಉಸಿರಾಟದ ಸಂಬಂಧಿತ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಅಸ್ತಮಾ, ಸಿಓಪಿಡಿ, ನ್ಯುಮೋನಿಯಾಗಳು, ಹಲವಾರು ಇತರ ಶ್ವಾಸಕೋಶದ ಕಾಯಿಲೆಗಳು ಮತ್ತು ನಿದ್ರೆಯಲ್ಲಿನ ಉಸಿರಾಟದ ಅಸ್ವಸ್ಥತೆಗಳು ಸೇರಿದಂತೆ ಉಸಿರಾಟದ ತೊಂದರೆ ಇರುವವರು ಇದರ ಪ್ರಯೋಜನ ಪಡೆಯಬಹುದು.

 

ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಮಾತನಾಡಿ, “ನಮ್ಮ ಗೌರವಾನ್ವಿತ ಆರೋಗ್ಯ ವೃತ್ತಿಪರರ ತಂಡಕ್ಕೆ ಡಾ ರಾಹುಲ್ ಮ್ಯಾಗಜಿನ್ ಅನ್ನು ಸ್ವಾಗತಿಸಲು ನಾವು ಸಂತೋಷ ಪಡುತ್ತೇವೆ.  ಶ್ವಾಸಕೋಶ ರೋಗಗಳ ತಜ್ಞರ ಸೇರ್ಪಡೆಯಿಂದ  ಉಡುಪಿಯ ಸಮುದಾಯಕ್ಕೆ ಉಸಿರಾಟ ಸಂಬಂಧಿತ ಕಾಯಿಲೆಗಳಿಗೆ ಸಕಾಲದಲ್ಲಿ ರೋಗನಿರ್ಣಯ ಮಾಡಲು ಮತ್ತು ವೈದ್ಯಕೀಯ ಚಿಕಿತ್ಸೆ  ನೀಡಲು ಸಾಧ್ಯವಾಗಲಿದೆ ಎಂದು  ಹೇಳಿದ್ದಾರೆ.

ಡಾ. ಶಶಿಕಿರಣ್ ಉಮಾಕಾಂತ್, ವೈದ್ಯಕೀಯ ಅಧೀಕ್ಷಕರು

 
 
 
 
 
 
 
 
 
 
 

Leave a Reply