ಕೋವಿಡ್ ನಿಯಮ ಪಾಲಿಸೋಣ.. ದೇಶವನ್ನು ಕರೋನಾ ಮುಕ್ತವಾಗಿಸೋಣ.

ಕೋವಿಡ್ 2ನೇ ಅಲೆಯು ಜೊರಾಗಿ ಬೀಸುತ್ತಿದೆ.ಈಗಾಗಲೇ ಮೊದಲನೇಯ ಅಲೆಯು ಜನರಿಗೆ ಸಂಕಷ್ಟದ ಪರಿಚಯ ಮಾಡಿಸಿದೆ.ಈ ಮೊದಲು ಪಾಲನೆ ಮಾಡುತ್ತಿದ್ದ ಕೋವಿಡ್ ನಿಯಮಗಳನ್ನು ಜನರು ಮರೆಯಲಾರಂಭಿಸಿದ್ದಾರೆ.ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದರೂ ಅದನ್ನು ಮರೆತಿರುವ ಕಾರಣದಿಂದ ಕರೋನಾ ಸಂಖ್ಯೆ ಹೆಚ್ಚಾಗುತ್ತಿದೆ.

ಮಾಸ್ಕ್ ಜೀವನದ ಅವಿಭಾಜ್ಯ ಅಂಗವಾಗಲಿ :- ಕರೋನಾ ಹತೋಟಿಯಲ್ಲಿ ಮಾಸ್ಕ್ ಬಹಳ ದೊಡ್ದ ಪಾತ್ರ ವಹಿಸುತ್ತದೆ. ಇದನ್ನು ಧರಿಸಲು ಉದಾಸೀನ ಬೇಡ .ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಸಾವ೯ಜನಿಕ ರಿಗೆ ಅರಿವು ಮೂಡಿಸುವ ಕಾಯ೯ ಮಾಡುತ್ತಿದ್ದಾರೆ.ದಂಡ ವಿಧಿಸುವುದಾಗಿ ಹೇಳಿದರೂ ಕೂಡ ಸಾವ೯ಜನಿಕರು ಈ ಬಗ್ಗೆ ಗಮನ ಹರಿಸದಿರುವುದು ಸರಿಯಲ್ಲ. ಇಂದು ವೈದ್ಯರ ಬಳಿ ತೆರಳುವಾಗ ಮಾತ್ರ ಮಾಸ್ಕ್ ಧರಿಸುದನ್ನು ನಾವು ನೋಡ ಬಹುದು. ಕೇವಲ ವೈದ್ಯರ ಬಳಿ ಮಾತ್ರ ವಲ್ಲ ನಿರಂತರವಾಗಿ ಇದನ್ನು ಧರಿಸಬೇಕಾಗಿದೆ.

ಸಕಾ೯ರ ಕೋವಿಡ್ ನಿಯಮಗಳನ್ನು ನಿಧಾ೯ಕ್ಷಿಣ್ಯವಾಗಿ ಜಾರಿಗೆ ತರಬೇಕು :– ಈಗಾಗಲೇ ಕೆಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಹಬ್ಬ ಹರಿದಿನಗಳ ನೆಪದಲ್ಲಿ ಜನ ಸಂದಣಿ ಹೆಚ್ಚಾಗುತ್ತಿದೆ .ಇದರಿಂದ ಕೋವಿಡ್ ನಾಗಾಲೋಟ ಪ್ರಾರಂಭಗೊಳ್ಳುವ ಆತಂಕವಿದೆ. ಹೀಗಾಗಿ ಸಕಾ೯ರ ಈ ಬಗ್ಗೆ ಕೂಡಲೇ ಎಚ್ಚರವಹಿಸಬೇಕಾದ ಅಗತ್ಯವಿದೆ.

ಕೋವಿಡ್ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಾಗಲಿ :- ಕೋವಿಡ್ ಲಸಿಕೆ ನೀಡುವ ವೇಗ ಹೆಚ್ಚಾಗಬೇಕು ಸಕಾ೯ರ ಎಪ್ರಿಲ್ ಒಂದರಿಂದ 45 ವಷ೯ ದಾಟಿದ ಎಲ್ಲರಿಗೂ ಲಸಿಕೆ ನೀಡಲು ತಯಾರಿ ನಡೆಸಿರುವುದು ಅಭಿನಂದನೀಯ ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ದೊರಕುವಂತಾಗಬೇಕು. ಲಸಿಕೆ ವಿಚಾರದಲ್ಲಿ ರಾಜಕೀಯ ಬದಿಗೊತ್ತಿ ಎಲ್ಲರಿಗೂ ಲಸಿಕೆ ಸಿಗಲಿ

ಲಾಕ್ ಡೌನ್ ಬೇಡ: – ಈಗಾಗಲೇ ಲಾಕ್ ಡೌನ್ ನಿಂದ ಜನರು ಎಚ್ಚೆತ್ತುಕೊಳ್ಳುವ ಹಂತದಲ್ಲಿದ್ದಾರೆ. ಮತ್ತೆ ಪುನಃ ಈ ಹಂತವನ್ನು ತರದೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಮಾಡಬೇಕಾಗಿದೆ.

ಜನಪ್ರತಿನಿಧಿಗಳು ಮಾದರಿಯಾಗಲಿ :- ಕೆರೋನಾ ನಿಯಮಗಳನ್ನು ಜಾರಿಗೆ ತರಲು ನಿಯಮಗಳನ್ನು ರೂಪಿಸುವ ಜನಪ್ರತಿನಿಧಿಗಳು ನಿಯಮಗಳನ್ನು ತಾವು ಮೊದಲು ಸರಿಯಾಗಿ ಪಾಲಿಸಬೇಕಾಗಿದೆ. ರಾಜಕೀಯ ಕಾಯ೯ಕ್ರಮಗಳು ಕರೋನಾ ನಿಯಮಗಳನ್ನ ಗಾಳಿಗೆ ತೂರದೆ ಪಾಲನೆ ಮಾಡಲಿ.

ಒಟ್ಟಾರೆಯಾಗಿ ಭಾರತವು ಕರೋನಾ ಹತೋಟಿಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಜನರ ಸಹಕಾರವಿಲ್ಲದೆ ಏನೂ ಮಾಡಲು ಅಸಾಧ್ಯ ಹೀಗಾಗಿ ಕರೋನಾ 2 ನೇ ಅಲೆಯು ಹತೋಟಿಗೆ ಬರಲು ಪ್ರಯತ್ನಿಸಬೇಕಾಗಿದೆ.
* ರಾಘವೇಂದ್ರ ಪ್ರಭು, ಕವಾ೯ಲು 

 
 
 
 
 
 
 
 
 
 
 

Leave a Reply