ಸೇವೆಯ ಮೂಲಕ ಮನೆಮಾತಾಗಿರುವ ಜೋಶಿ ದಂಪತಿಗಳು

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶಯದಲ್ಲಿ ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2023.
ಡಾ| ಕೆ. ಆರ್. ಜೋಶಿ,  ಡಾ| ರೇಣುಕಾ ಆರ್ ಜೋಶಿ
ವೈದ್ಯೋ ನಾರಾಯಣೋ ಹರಿ: ನಮ್ಮ ಸಮಾಜ ಹಲವಾರು ವೈದ್ಯರು ತಮ್ಮ ಅಮೂಲ್ಯವಾದ ಸೇವೆಯ ಮೂಲಕ ಮನೆಮಾತಾಗಿದ್ದಾರೆ. ಇಂತಹ ಅಪೂವ೯ ವೈದ್ಯ ದಂಪತಿಗಳಲ್ಲಿ ಇವರೂ ಕೂಡ ಸೇರಿದ್ದಾರೆ.ಕಾರ್ಕಳದ ಪ್ರಸಿದ್ಧ ವೈದ್ಯರಾಗಿರುವಂತಹ ಡಾ। ಕೆ ಆರ್ ಜೋಶಿ ಇವರು 1964 ರಲ್ಲಿ ಇತಿಹಾಸ ಪ್ರಸಿದ್ಧ ಕಾಕ೯ಳದಲ್ಲಿ ಜನಿಸಿದ್ದು, ತಮ್ಮ ಪ್ರಾರಂಭಿಕ  ವಿದ್ಯಾಭ್ಯಾಸವನ್ನು ಕಾರ್ಕಳದ ಸ್ಥಳೀಯ ಶಾಲಾ-ಕಾಲೇಜುಗಳಲ್ಲಿ ಪೂರೈಸಿರುತ್ತಾರೆ. ತಮ್ಮೆಲ್ಲ ಶಿಕ್ಷಣದ ಅವಧಿಯಲ್ಲಿ ತರಗತಿಯಲ್ಲಿ ಮೊದಲ ಸ್ಥಾನದಲ್ಲಿ ಉತ್ತೀಣ೯ರಾಗಿರುವುದು ದಾಖಲೆಯೇ ಸರಿ.

ಅದರಲ್ಲಿ ಕೂಡ ಗಣಿತ ವಿಷಯದಲ್ಲಿ ಇವರು ಎತ್ತಿದ ಕೈ .ಶೇಕಡ ನೂರಕ್ಕೆ ನೂರು ಅಂಕಗಳೊಂದಿಗೆ ಗಣಿತದಲ್ಲಿ ಪಾಸಾಗಿರುವುದು  ಗಮನಿಸಬೇಕಾದ ವಿಷಯವಾಗಿದೆ. ಪಿಯುಸಿ ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ 10ನೇ ರಾಂಕ್ ಪಡೆದು ಕೊಂಡಿರುವುದು ಅವರ ಶಿಕ್ಷಣ ಸಾಧನೆಗೆ ದೊರಕಿರುವ ದೊಡ್ಡ ಬಹುಮಾನ. ವೈದ್ಯಕೀಯ ಶಿಕ್ಷಣ ಪ್ರಾರಂಭಿಕ ಪರೀಕ್ಷೆಯಲ್ಲಿ ರಾಜ್ಯದಲ್ಲಿ 9ನೇ ರಾಂಕ್ ಪಡೆದಿರುವುದು ಅಭಿನಂದನೀಯ.
ತಮ್ಮ ಎಂ.ಬಿ.ಬಿ.ಎಸ್ ಶಿಕ್ಷಣವನ್ನು ಸರ್ಕಾರಿ ಕೋಟದೊಂದಿಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಉತ್ತಮ ಶ್ರೇಣಿಯಲ್ಲಿ ಪೂರೈಸಿ , ನಂತರ ಎಂ.ಡಿ ಪದವಿಯನ್ನು ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ದಲ್ಲಿ ಮುಗಿಸಿರುತ್ತಾರೆ. ತಮ್ಮ ವೈದ್ಯಕೀಯ  ಶಿಕ್ಷಣದ ಬಳಿಕ 26 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ವೈದ್ಯಾಧಿಕಾರಿಯಾಗಿ ಅಪೂರ್ವ ಸೇವೆ ಸಲ್ಲಿಸಿ, ನಂತರ ತಮ್ಮ ಊರು ಕಾಕ೯ಳದಲ್ಲಿ  ತಮ್ಮದೇ ಆದ ಕ್ಲಿನಿಕ್ ನಲ್ಲಿ ವೈದ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗೆ  ಒಟ್ಟು 34 ವರ್ಷಗಳ ಕಾಲ ತಮ್ಮ  ಅಮೂಲ್ಯವಾದ ವೈದ್ಯಸೇವೆಯನ್ನು  ನೀಡುತ್ತಿದ್ದಾರೆ. ಸಾಮಾಜಿಕ, ಸಾಹಿತ್ಯ ಸೇವೆ :– ಅವರು ಉತ್ತಮ ವೈದ್ಯರು ಹಾಗೂ ಒಬ್ಬ ಅಪ್ರತಿಮ ಸಂಘಟಕರಾಗಿದ್ದಾರೆ.  ಭಾರತೀಯ ವೈದ್ಯ ಸಂಘದ ಕಾರ್ಕಳ ತಾಲೂಕಿನ ಅಧ್ಯಕ್ಷರಾಗಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಅನೇಕ ರೀತಿಯ ಜನೋಪ ಯೋಗಿ ಕಾಯ೯ಗಳನ್ನು ಮಾಡಿರುತ್ತಾರೆ.

ಅದೇ ರೀತಿ ರೆಡ್ ಕ್ರಾಸ್ ಕಾರ್ಕಳ ಇದರ ಸ್ಥಾಪಕ ಅಧ್ಯಕ್ಷರಾಗಿರುವ ಇವರು ಅನೇಕ ವೈದ್ಯಕೀಯ ಶಿಬಿರ, ರಕ್ತದಾನ ಮುಂತಾದ ಹತ್ತು ಹಲವಾರು ಕಾಯ೯ಗಳನ್ನು ಮಾಡಿದ್ದಾರೆ. ಸಾಹಿತ್ಯದಲ್ಲಿ ಕೂಡ ಆಸಕ್ತಿ ಹೊಂದಿದ್ದು, ಉತ್ತಮ ಓದುಗರರೂ ಹೌದು.

ಇವರು  ವಿವಿಧ ರೀತಿಯ ಸಂಘ-ಸಂಸ್ಥೆಯಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಗಣಿತದಲ್ಲಿ ವಿಶೇಷವಾದ ಪರಿಣಿತಿ ಯನ್ನು ಪಡೆದಿರುವುಮ ಇವರ ಹೆಗ್ಗಳಿಕೆಯಾಗಿದೆ. ಇವರು ತಮ್ಮ ತಂದೆ ಖ್ಯಾತ ಗಣಿತ ಶಿಕ್ಷಕರಾದ ಮಾಧವ ಜೋಶಿ ತಾಯಿ ಮುಕ್ತ ರವರ ಮೂಲಕ ಗಣಿತದ ಆಸಕ್ತಿ ಬೆಳೆಸಿಕೊಂಡರು ಒಟ್ಟಾಗಿ ಬಹುಮುಖ ಪ್ರತಿಭಾ  ಸಂಪನ್ನ ವೈದ್ಯರಾಗಿದ್ದಾರೆ.

ಮಡದಿ ಡಾ ರೇಣುಕಾ ಆರ್ ಜೋಶಿ ಇವರು ಆಯುರ್ವೇದಿಕ್  ವೈದ್ಯರಾಗಿದ್ದು, ತನ್ನ ಬಿ ಎ ಎಂ ಎಸ್ ಪದವಿಯನ್ನು ಹುಬ್ಬಳ್ಳಿ ಮೆಡಿಕಲ್ ಕಾಲೇಜಿನಿಂದ ಪಡೆದಿದ್ದು, ಕಾರ್ಕಳದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಎರಡು ಜನ ಗಂಡು  ಮಕ್ಕಳಾದ ಆಶಿಶ್ ಮತ್ತು ಅನಿಶ್ ಇಂಜಿನಿಯರಿಂಗ್  ಓದುತ್ತಿದ್ದಾರೆ.
~ ರಾಘವೇಂದ್ರ ಪ್ರಭು ಕರ್ವಾಲು
 
 
 
 
 
 
 
 
 
 
 

Leave a Reply