ವಿಶ್ವಜ್ಞಾನ ಹಿ.ಪ್ರಾ.ಶಾಲೆಯಲ್ಲಿ ಸಸ್ಯಜ್ಞಾನದ ಅರಿವು

ವಿಶ್ವಜ್ಞಾನ ಹಿ.ಪ್ರಾ.ಶಾಲೆಯವಠಾರದಲ್ಲಿ 100 ಹಣ್ಣಿನ ಸಸಿಗಳನ್ನು ನೆಡುವ ಮೂಲಕ ವನ ಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ  ಅತಿಥಿಗಳನ್ನು ಮುಖ್ಯ ಶಿಕ್ಷಕ ಸುದೀರ್ ಶೆಟ್ಟಿ ಸ್ವಾಗತಿಸಿದರು. 
ವಾಣಿ ಪ್ರೌಡ ಶಾಲೆಯ ಮುಖ್ಯ ಶಿಕ್ಷಕ  ವಿಶ್ವನಾಥ್ ಶೆಟ್ಟಿ ಸಸಿ ನೆಡುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ಸಿ.ಆರ್,ಪಿ. ದೀಪಾ ಶೆಟ್ಟಿಯವರು ಇಲಾಖೆಯ ಪರವಾಗಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ಅಧಿಕಾರಿ ಹರೀಶ್ ಮೆಚ್ಚುಗೆ ವ್ಯಕ್ತ ಪಡಿಸಿದರು. 
ನಿವೃತ್ತ ಮುಖ್ಯ ಶಿಕ್ಷಕ ವಾಸುದೇವಶೆಟ್ಟಿ, ನಂದಿ ಗೇರು ಬೀಜ ಕಾರ್ಖಾನೆ ಮಾಲಕ ಸಂದೀಪ್, ಚಿನ್ಮಯ ಯುವಕ ಮಂಡಲದಅಧ್ಯಕ್ಸ ಗಣೇಶ್ ಆಚಾರ್ , ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಘುರಾಮ್ ಶೆಟ್ಟಿ, ವಿಜಯ್, ಸ್ಥಳೀಯ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರು, ಅಡುಗೆ ಸಿಬ್ಬಂದಿಯವರು ಹಳೆವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಮಂದಾರ್ತಿಯ ವನಪಾಲಕರು, ಊರವರು  ಕಾರ್ಯಕ್ರಮ ದಲ್ಲಿ ಭಾಗವಹಿಸಿದರು, ವಾಣಿ ಹಿ. ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಸೌಮ್ಯಲತಾ ಶೆಟ್ಟಿ ವಂದಿಸಿದರು. 
 
 
 
 
 
 
 
 
 
 
 

Leave a Reply