ಕಲಿಕೆಗೆ ವಯಸ್ಸಿನ ಅಂತರವಿಲ್ಲ~ 44ನೇ ವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪಾಸ್ !

ಮಂಗಳೂರು: ಕಲಿಕೆ ನಿರಂತರ.  ಕಲಿಯಬೇಕು ಎಂಬ ಹಂಬಲವಿದ್ದರೆ ವಯಸ್ಸು ಅಡ್ಡಿ ಬರೋದಿಲ್ಲ ಎಂಬುದನ್ನು ಸಾಬೀತು ಮಾಡಿದವರು ಮಂಗಳೂರು ಯುನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಟೆಂಪರರಿ ಅಟೆಂಡರ್ ಜಯಶ್ರೀ. 44 ವಯಸ್ಸಿನ ಜಯಶ್ರೀ ಕೆಲಸದ ಜತೆಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಿರ್ಣರಾಗಿದ್ದಾರೆ. ಮೂಲತ ವೆಲೆನ್ಸಿಯ ಸೂಟರ್ ಪೇಟೆಯಲ್ಲಿ ತನ್ನ ಪತಿ ಪ್ರದೀಪ್ ಅವರೊಂದಿಗೆ  ವಾಸಿಸುತ್ತಿದ್ದಾರೆ.

ಪತಿ ಬ್ಯಾಂಕ್ ನಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಯಶ್ರೀ ಅವರು 5ನೇ ತರಗತಿ ವರೆಗೆ ಕಲಿತಿದ್ದಾರೆ.10ನೇ ತರಗತಿಗೆ ನೇರವಾಗಿ ಪರೀಕ್ಷೆ ಬರೆದಿದ್ದಾರೆ. ಖಾಸಗಿ ಟ್ಯೂಶನ್ ಕ್ಲಾಸ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನದಲ್ಲೇ ಬೆಳೆದ ಇವರು ಮಂಗಳೂರಿನ ಪದಂಗ ಡಿಯ ಗಂಧಕಾಡ್ ಪರಿಸರದಲ್ಲಿ ದಿ.  ಸೀತಾರಾಮ ಹಾಗೂ ಜಾನಕಿ (75) ಅವರಿಗೆ 4 ಹೆಣ್ಣು ಹಾಗೂ1 ಗಂಡು ಮಕ್ಕಳು. 

ಜಯಶ್ರೀ ಅವರೆ ಹೇಳುವ ಪ್ರಕಾರ ಯೂನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶೋಭಾ ಮೇಡಂ ಹಾಗೂ ಉದಯ ಕುಮಾರ್ ಇರ್ವತ್ತೂರು ಅವರೆ ಕಲಿಯಲು ದಾರಿ ತೋರಿಸಿದವರು. ಕಲಿಯುವ ವಯಸ್ಸಲ್ಲಿ ಕಲಿಯಲು ಮನಸಿದ್ದರೂ ಪ್ರೇರೇಪಣೆ ನೀಡುವರಾರಿರಲಿಲ್ಲ. ನನಗೆ ಪರ್ಮನೆಂಟ್ ಆದರೆ ಜೀವನಕ್ಕೆ ದಾರಿಯಾಗುತ್ತದೆ ಎನ್ನುವ ಆಶಾಭಾವನೆಯಲ್ಲಿದ್ದರೆ ಜಯಶ್ರೀ . 

 
 
 
 
 
 
 
 
 
 
 

Leave a Reply