ಯು.ಪಿ.ಎಂ.ಸಿ- ಎನ್.ಎಸ್.ಎಸ್ ಚಟುವಟಿಕೆಗಳಿಗೆ ಚಾಲನೆ.

ಫಲಾಪೇಕ್ಷೆ ರಹಿತ ಸೇವೆಯೇ ಎನ್.ಎಸ್.ಎಸ್

ಫಲಾಪೇಕ್ಷೆ ಇಲ್ಲದ ಸೇವೆಯೇ ಎನ್‌.ಎಸ್.ಎಸ್ ಗುರಿ ಯಾಗಿದ್ದು ಇದರಿಂದ ಸಮಾಜ ಗುರುತಿಸುವ ವ್ಯಕ್ತಿತ್ವ ನಮ್ಮದಾಗುತ್ತದೆ ಶಿಕ್ಷಣದ ಜೊತೆಗೆ ಪ್ರತಿಭೆಗಳಿಗೆ ಅವಕಾಶ ನೀಡುವ ಎನ್.ಎಸ್‌.ಎಸ್ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಾಗ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಬಹುದು ಎಂಬುದಾಗಿ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಿದ್ಯಾ.ಡಿ ಹೇಳಿದರು.

ಅವರು ದಿನಾಂಕ ನವೆಂಬರ್ 22 ರಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್ ಚಟುವಟಿಕೆಗಳಿಗೆ ಚಾಲನೆ ನೀಡುತ್ತಾ ಮಾತನಾಡುತ್ತಿದ್ದರು.

ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಕು.ಮಹಾಲಸಾ ಕಿಣಿಯವರು ಕಾಲೇಜು ಅವಧಿಯಲ್ಲಿ ಎನ್‌.ಎಸ್.ಎಸ್ ನ ಅವಕಾಶಗಳನ್ನು ಬಳಸಿಕೊಂಡು ಬದುಕಿನ ಯಶಸ್ಸು ಸಾಧಿಸಿರುವುದನ್ನು ತಿಳಿಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು, ಎನ್‌.ಎಸ್.ಎಸ್. ಯೋಜನಾಧಿಕಾರಿ ರಾಜೇಶ್ ಕುಮಾರ್ ಸ್ವಾಗತಿಸಿದರು, ಸಹಯೋಜನಾಧಿಕಾರಿ ಚಂದ್ರ ಶೇಖರ್ ವಂದಿಸಿದರು, ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply